ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಹೀರೋ ಆಗಿ ಶಂಕರ್ ನಿರ್ದೇಶನದಲ್ಲಿ ಒಂದು ಸಿನಿಮಾ ಬರುತ್ತಿರೋದು ಗೊತ್ತಿರುವ ವಿಚಾರವೇ.
ದಿಲ್ ರಾಜು ಈ ಸಿನಿಮಾದ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ಈ ಸಿನಿಮಾದಲ್ಲಿ ಕಿಯಾರಾ ಅಡ್ವಾನಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಈ ಚಿತ್ರದಲ್ಲಿ ರಾಮ್ ಚರಣ್ ದ್ವಿಪಾತ್ರದಲ್ಲಿ ನಟನೆ ಮಾಡುತ್ತಿರೋದು ಗೊತ್ತಿರುವ ವಿಚಾರವೇ.
ಈ ಪೈಕಿ ಒಂದು ಪಾತ್ರ ವಿದ್ಯಾರ್ಥಿಯಾಗಿ, ಮತ್ತೊಂದು ಸರ್ಕಾರಿ ಉದ್ಯೋಗಿ ಕಾಣಿಸಿಕೊಳ್ಳಲಿದ್ದಾರೆ.
ಈ ಸಿನಿಮಾಗೆ ಇಲ್ಲಿಯವರೆಗೂ ವಿಶ್ವಂಭರ, ಸರ್ಕಾರೋಡು ಅನ್ನೋ ಟೈಟಲ್ ಗಳು ಕೇಳಿಸುತ್ತಿವೆ.
ಇದರ ನಡುವೆ ಇದೀಗ ಅಧಿಕಾರಿ ಅನ್ನೋ ಟೈಟಲ್ ಮುನ್ನಲೆಗೆ ಬಂದಿದೆ.
ಚರಣ್ ಪ್ರಭುತ್ವ ಅಧಿಕಾರಿಯಾಗಿ ನಟಿಸುತ್ತಿರುವ ಕಾರಣ ಈ ಟೈಟಲ್ ಸರಿಹೊಂದುತ್ತದೆ ಎಂದು ಚಿತ್ರತಂಡ ಭಾವಿಸಿದೆ.
ಅಂದಹಾಗೆ ಈ ಸಿನಿಮಾದ ಶೂಟಿಂಗ್ ಅಕ್ಟೋಬರ್ ನಲ್ಲಿ ಅಂತ್ಯವಾಗಲಿದೆ ಎಂದು ಸಿನಿಮಾ ಮೂಲಗಳು ತಿಳಿಸಿವೆ.