ತಮಿಳಿನ ಸೂಪರ್ ಸ್ಟಾರ್ ಅಜಿತ್ ಕುಮರ್ ಇಂಗ್ಲೆಂಡ್ ನಲ್ಲಿ ಬೈಕ್ ರೈಡ್ ಮಾಡಿದ್ದಾರೆ.. ಈಗಾಗಲೇ ಭಾರತದಲ್ಲಿ ದೇಶದ ವಿವಿಧ ಭಾಗಗಳನ್ನ ಸುತ್ತುತ್ತಿರುತ್ತಾರೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ನಟ ಬೈಕ್ ನಲ್ಲಿ ಇಂಗ್ಲೆಂಡ್ ಟ್ರಿಪ್ ಮಾಡುವ ಮೂಲಕ ವಿಶ್ವ ಪರ್ಯಟನೆ ಮಾಡುತ್ತಿದ್ದಾರೆ.
ಯುನೈಟೆಡ್ ಕಿಂಗ್ಡಮ್ ನಲ್ಲಿ ಬೈಕ್ ಜೊತೆ ರೈಡಿಂಗ್ ಗೇರ್ ನಲ್ಲಿ ಕಾಣಿಸಿಕೊಂಡಿರುವ ನಟ ಅಜಿತ್ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಅಜಿತ್ ಅವರು ವಲಿಮೈ ನಿರ್ದೇಶಕ ಎಚ್ ವಿನೋತ್ ಅವರ ಮುಂಬರುವ ಚಿತ್ರದ ಚಿತ್ರೀಕರಣದಲ್ಲಿ ಹೈದರಾಬಾದ್ ನಲ್ಲಿ ಬೀಡುಬಿಟ್ಟಿದ್ದರು. ಆದರೆ ಬೈಕ್ ಟ್ರಿಪ್ಗಾಗಿ ಶೂಟಿಂಗ್ನಿಂದ ವಿರಾಮ ತೆಗೆದುಕೊಂಡಂತೆ ತೋರುತ್ತಿದೆ.
ಕಳೆದ ಬಾರಿ ಸಿಕ್ಕಿಂ ಮತ್ತು ಕೋಲ್ಕತ್ತಾ ಪ್ರವಾಸಕ್ಕೆ ತೆರಳಿದ ಅಜಿತ್ ಇದೀಗ ತಮ್ಮ ಮುಂದಿನ ಬೈಕ್ ಟ್ರಿಪ್ ಗಾಗಿ ವಿದೇಶಕ್ಕೆ ತೆರಳಿದ್ದಾರೆ. ಅಜಿತ್ ತಮ್ಮ ರೈಡಿಂಗ್ ಗೇರ್ನಲ್ಲಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಪ್ರವಾಸದ ನಂತರ ಅಜಿತ್ ಮತ್ತೆ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಜಿತ್ ಕುಮಾರ್ ಕೊನೆಯದಾಗಿ ಎಚ್ ವಿನೋತ್ ನಿರ್ದೇಶನದ ವಲಿಮೈ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ಅದೇ ಕಾಂಬಿನೇಷನ್ ಮತ್ತೊಂದು ಸಿನಿಮಾ ತೆರೆಕಾಣಲಿದೆ. ಅಜಿತ್ ಅಭಿನಯದ 61 ನೇ ಚಿತ್ರಕ್ಕೆ ಎಚ್ ವಿನೋತ್ ನಿರ್ದೇಶಿಸಿಸುತ್ತಿದ್ದು ಬೋನಿ ಕಪೂರ್ ಹಣ ಹೂಡುತ್ತಿದ್ದಾರೆ. ಹೈದರಾಬಾದ್ನಲ್ಲಿ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. 2023 ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.