ಸ್ಯಾಂಡಲ್ ವುಡ್ ನಟ ದಿಗಂತ್ ಅವರಿಗೆ ಗೋವಾದಲ್ಲಿ ಅಪಘಾತವಾಗಿದೆ.. ಇನ್ನೂ ಅವರ ಪರಿಸ್ಥಿತಿ ಗಂಭೀರವಾಗಿದೆ ಎನ್ನಲಾಗ್ತಿದೆ… ಗೋವಾದಲ್ಲಿ ಪ್ರವಾಸದಲ್ಲಿದ್ದಾಗ ಈ ಘಟನೆ ನಡೆದಿದೆ.
ನಟ ದಿಗಂತ್ ಅವರು ಗೋವಾದಲ್ಲಿ ತಮ್ಮ ಆಪ್ತರು ಹಾಗೂ ಗೆಳೆಯರೊಡನೆ ಪ್ರವಾಸಕ್ಕೆ ತೆರಳಿದ್ದರು. ಟ್ರೆಕ್ಕಿಂಗ್ ಸೇರಿದಂತೆ ಇನ್ನಿತರೆ ಸಾಹಸ ಕ್ರೀಡೆಗಳಲ್ಲಿ ಅವರು ತೊಡಗಿಕೊಂಡಿದ್ದರು. ಸಾಹಸ ಕ್ರೀಡೆಗಳನ್ನು ಆಡುವ ವೇಳೆ ಅಚಾನಕ್ಕಾಗಿ ದಿಗಂತ್ ಅವರ ಕತ್ತಿಗೆ ತೀವ್ರ ಪೆಟ್ಟಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಗೋವಾದ ಬೀಚ್‌ನಲ್ಲಿ ಬ್ಯಾಕ್ ಫ್ಲಿಪ್ ಮಾಡುವ ವೇಳೆ ಆಯತಪ್ಪಿ ತಲೆ ಕೆಳಗಾಗಿ ಬಿದ್ದ ಪರಿಣಾಮ ದಿಗಂತ್ ಕುತ್ತಿಗೆಗೆ ತೀವ್ರ ಪೆಟ್ಟಾಗಿದೆ ಎನ್ನಲಾಗುತ್ತಿದೆ.
ಘಟನೆ ನಡೆದ ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಅವರ ಕತ್ತಿನ ಮೂಳೆಗೆ ತೀವ್ರ ಪೆಟ್ಟಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಿಗಂತ್ ಅವರನ್ನು ಏರ್ ಆಂಬುಲೆನ್ಸ್‌ನಲ್ಲಿ ಬೆಂಗಳೂರಿಗೆ ತರಲಾಗುತ್ತಿದೆ. ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಗುತ್ತದೆ ಎನ್ನಲಾಗುತ್ತಿದೆ.
ಆದರೆ, ಆತಂಕ ಪಡುವ ಅಗತ್ಯವೇನು ಇಲ್ಲ ಎಂದು ಆಪ್ತ ಮೂಲಗಳು ತಿಳಿಸಿವೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಬರಲಾಗುತ್ತಿದೆ.
ಇನ್ನೂ ಸಿನಿಮಾ ವಿಚಾರಕ್ಕೆ ಬಂದ್ರೆ ನಟ ದಿಗಂತ್ ಅವರ ಅಭಿನಯದ ಗಾಳಿಪಟ 2 ಸಿನಿಮಾ ಬಿಡುಗಡೆ ಆಗಬೇಕಿದೆ. ಅದರ ಹೊರತಾಗಿ ಮಾರಿಗೋಲ್ಡ್ , ಎಡಗೈ ಅಪಘಾತಕ್ಕೆ ಕಾರಣ ಸೇರಿದಂತೆ ಇನ್ನೂ ಕೆಲ ಪ್ರಾಜೆಕ್ಟ್ ಗಳು ಅವರ ಬಳಿಯಿದೆ..