ಎಲ್ರಿಗೂ ಗೊತ್ತಿರುವ ಹಾಗೆ ಮೆಗಾಸ್ಟಾರ್ ಚಿರಂಜೀವಿ ಗಾಡ್ ಫಾದರ್ ಮೂವಿಯಲ್ಲಿ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದೀಗ ಇಂಡಿಯನ್ ಸ್ಟಾರ್ ಆಗಿ ಗುರುತಿಸಿಕೊಂಡಿರುವ ರಾಮ್ ಚರಣ್ ಅವರು ಸಲ್ಮಾನ್ ಅವರ ಬಾಲಿವುಡ್ ಸಿನಿಮಾದಲ್ಲಿ ಬಣ್ಣ ಹಚ್ಚೋಕೆ ತಯಾರಾಗಿದ್ದಾರೆ..
ಸಲ್ಮಾನ್ ಖಾನ್ ಅವರ ಕಭಿ ಈದ್ ಕಭಿ ದಿವಾಲಿ ಸಿನಿಮಾದಲ್ಲಿ ರಾಮ್ ಚರನ್ ಕಾಣಿಸಿಕೊಳ್ಳಲಿದ್ದಾರೆ ಎಂದು ಬಾಲಿವುಡ್ ಮೂಲಗಳು ತಿಳಿಸಿವೆ.
ಸದ್ಯ ಶೂಟಿಂಗ್ ಹಂತದಲ್ಲಿರುವ ಈ ಸಿನಮಾದಲ್ಲಿ ತೆಲುಗಿನ ಸ್ಟಾರ್ ನಟ ವೆಂಕಟೇಶ್ ಕೂಡ ನಟಿಸುತ್ತಿದ್ದಾರೆ.
ಇನ್ನೇನು ಕೆಲವೇ ದಿನಗಳಲ್ಲಿ ಈ ಸಿನಿಮಾದ ಶೂಟಿಂಗ್ ಹೈದರಾಬಾದ್ ನಲ್ಲಿ ನಡೆಯಲಿದೆ.
ಇಲ್ಲಿ ಸಲ್ಮಾನ್ ಮತ್ತು ಚರಣ್ ಸೀನ್ ಗಳನ್ನು ಚಿತ್ರೀಕರಣ ಮಾಡಲಾಗುತ್ತದೆ ಅನ್ನೋದು ಸಮಾಚಾರ.