10 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಟಾಲಿವುಡ್ ನ ಸ್ಟಾರ್ ಕಪಲ್ ಸಮಂತಾ ನಾಗಚೈತನ್ಯ ಕೆಲ ತಿಂಗಳುಗಳ ಹಿಂದಷ್ಟೇ ಡಿವೋರ್ಸ್ ಪಡೆದಿದ್ದು ತಮ್ಮ ನಾಲ್ಕು ವರ್ಷಗಳ ದಾಂಪತ್ಯಕ್ಕೆ ಇತಿಶ್ರೀ ಹಾಡಿದ್ದಾರೆ..
ಇವರ ಡಿವೋರ್ಸ್ ಸುದ್ದಿಯಿಂದ ಅಭಿಮಾನಿಗಳು ಸಿಕ್ಕಾಪಟ್ಟೆ ಶಾಕ್ ಆಗಿದ್ದರು.. ಇವರಿಬ್ಬರೂ ಸಹ ಈ ವಿಚಾರವಾಗಿ ಮೌನವಾಗಿದ್ರೂ ನೆಟ್ಟಿಗರು ಸೈಲೆಂಟ್ ಇರಲ್ಲ.. ಈವರೆಗೂ ಇಬ್ಬರ ಅಭಿಮಾನಿಗಳೂ ಪರಸ್ಪರರನ್ನ ಟ್ರೋಲ್ ಮಾಡ್ತಾ ಬಂದಿದ್ದಾರೆ.. ಇಬ್ಬರೂ ಸದ್ಯ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ..
ಈ ಜೋಡಿ ಮತ್ತೆ ಒಂದಾಗಬೇಕೆಂಬ ಆಶಯ ಅಭಿಮಾನಿಗಳದ್ದು.. ಅವರ ಆಸೆ ಕನಸಿಗೆ ಈಗ ತಣ್ಣೀರೆರೆಚುವಂತಹ ಸುದ್ದಿಯೊಂದು ಹರಿದಾಡ್ತಿದೆ.. ಅದೇ ಸಮಂತ ಜೊತೆಗೆ ಡಿವೋರ್ಸ್ ಪಡೆದ ಬಳಿ ನಟ ನಾಗ್ ಚೈತನ್ಯ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆಂದು ನಟಿ ಶೋಭಿತಾ ಧೂಳಿಪಾಲ ಜೊತೆ ಡೇಟಿಂಗ್ ನಲ್ಲಿದಾರೆ ಎಂಬ ಸುದ್ದಿ.. ಇದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಈ ಸುದ್ದಿಗೆ ಪ್ರತಿಕ್ರಿಯೆಸುತ್ತಾ ನಾಗ್ ಚೈತನ್ಯ ಅಭಿಮಾನಿಗಳು ನಾಗ್ ಇಮೇಜ್ ಡ್ಯಾಮೇಜ್ ಮಾಡಲು ಸಮಂತಾ ಪಿರ್ ಆರ್ ಟೀಂ ಈ ರೀತಿ ರೋಮರ್ಸ್ ಸೃಷ್ಠಿ ಮಾಡುತ್ತಿದೆ ಎಂದು ಟ್ವೀಟ್ ಮಾಡುತ್ತಿದ್ದಾರೆ.
ಈ ರೀತಿಯ ಟ್ವೀಟ್ ಗಳ ಬಗ್ಗೆ ಸಮಂತಾ ಅಸಮಾಧಾನಗೊಂಡಿದ್ದಾರೆ.. ಹೆಣ್ಣುಮಕ್ಕಳ ಮೇಲೆ ವದಂತಿಗಳು ಬಂದರೇ ನಿಜವೇ ಆದ್ರೆ ಗಂಡುಮಕ್ಕಳ ಮೇಲೆ ಬಂದರೇ ಹೆಣ್ಣು ಮಕ್ಕಳೇ ಮಾಡಿಸುತ್ತಿದ್ದಾರೆಂದು ಪ್ರಚಾರ ಮಾಡ್ತೀರಾ ಎಂದು ಆಕ್ರೋಶಭರಿತವಾಗಿ ಪ್ರಶ್ನೆ ಮಾಡಿದ್ದಾರೆ.. ಅಲ್ಲದೇ ಕಾಲ ಬದಲಾಗಿದೆ.. ನೀವು ಸಹ ಮುಂದುವರೆಯಿರಿ ಎಂದು ಕೋಪ ತೋರಿಸಿಕೊಂಡಿದ್ಧಾರೆ..
ಇನ್ನು ಸಿನಿಮಾಗಳ ಬಗ್ಗೆ ಹೇಳುವುದಾದರೆ.. ನಾಗಚೈತನ್ಯ ನಾಯಕನಾಗಿ ನಟಿಸಿರುವ ‘ಥ್ಯಾಂಕ್ಯೂ’, ಲಾಲ್ ಸಿಂಗ್ ಚಡ್ಡಾ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ.
ಅಲ್ಲದೇ ಸದ್ಯದಲ್ಲೇ ‘ದೂತ’ ವೆಬ್ ಸಿರೀಸ್ ಬಿಡುಗಡೆಯಾಗಲಿದೆ.
ಇನ್ನು ಸಮಂತಾ.. ಇತ್ತೀಚೆಗಷ್ಟೇ ಕೆಆರ್ ಕೆ ಸಿನಿಮಾದಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದರು.
ಸದ್ಯ ಆಕೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಯಶೋದಾ ಮತ್ತು ಶಕುಂತಲಂ ಬಿಡುಗಡೆಗೆ ಸಿದ್ಧವಾಗಿದೆ.