ಇತ್ತೀಚೆಗೆ ಕಿರುತೆರೆ ಬಣ್ಣದ ಲೋಕದಲ್ಲಿ ಅದೇನಾಗಿದ್ಯೋ ಗೊತ್ತಿಲ್ಲ ಸರಣಿ ಆತ್ಮಹತ್ಯೆ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ.. ಇದೀಗ ಮತ್ತೊಬ್ಬ ಕಿರುತೆರೆ ನಟಿ ಆತ್ಮಹತ್ಯೆಗೆ ಶರಣಾಗಿದ್ಧಾರೆ..
ಒಡಿಶಾದ ಖ್ಯಾತ ಕಿರುತೆರೆ ನಟಿ 23ರ ರಶ್ಮಿ ರೇಖಾ ಓಜಾ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಅವರ ಸಾವಿಗೆ ಬಾಯ್ ಫ್ರೆಂಡ್ ಸಂತೋಷ್ ಕಾರಣವೆಂದು ಪೋಷಕರು ಆರೋಪಿಸಿದ್ದಾರೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಒಡಿಶಾದ ಸಾಕಷ್ಟು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿರುವ ನಟಿ ರಶ್ಮಿರೇಖಾಗೆ ಅಪಾರ ಅಭಿಮಾನಿಗಳ ಬಳಗವಿದೆ. ರಶ್ಮಿಯ ಅಕಾಲಿಕ ಸಾವು ಪೋಷಕರಿಗೆ, ಸ್ನೇಹಿತರಿಗೆ ಶಾಕ್ ನೀಡಿದೆ. ಭುವನೇಶ್ವರದ ನಯಪಿಳ್ಳಿ ಭಾಗದಲ್ಲಿ ರಶ್ಮಿ ರೇಖಾ ಓಜಾ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದೆ. ರಶ್ಮಿ ಸಾವಿಗೂ ಮುನ್ನ ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ.
ಅಸಹಜ ಸಾವು ಎಂದು ಸದ್ಯಕ್ಕೆ ಪೊಲೀಸರು ಕೇಸ್ ದಾಖಾಲಿಸಿಕೊಂಡಿದ್ದಾರೆ. ಸದ್ಯ ನಟಿ ರೇಖಾ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.