ರಣಬೀರ್ ನಟನೆಯ ಶಂಶೇರಾ ಟೀಸರ್ ರಿಲೀಸ್ ಆಯ್ತು..!! ಹೇಗಿದೆ ರಣಬೀರ್ ಲುಕ್..???
ಇತ್ತೀಚೆಗೆಷ್ಟೇ ರಣಬೀರ್ ಆಲಿಯಾ ಅಭಿನಯದ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ ಬ್ರಹ್ಮಾಸ್ತ್ರದ ಟ್ರೇಲರ್ ಐದೂ ಭಾಷೆಗಳಲ್ಲೂ ರಿಲೀಸ್ ಆಗಿ ಧೂಳೆಬ್ಬಿಸಿದ್ದು , ಬಾಲಿವುಡ್ ಗೆ ಹೊಸ ಭರವಸೆಯಾಗಿ ನಿಂತಿದೆ…
ಇದೀಗ ರಣಬೀರ್ ನಟನೆಯ ಮತ್ತೊಂದು ಸಿನಿಮಾವಾದ ಶಂಶೇರಾದ ಟೀಸರ್ ರಿಲೀಸ್ ಆಗಿದೆ..
ಯಶರಾಜ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ರಣಬೀರ್ ಕಪೂರ್ ನಾಯಕನಾಗಿ ನಟಿಸುತ್ತಿರುವ ಚಿತ್ರ ‘ಶಂಶೇರಾ’. ಕರಣ್ ಮಲ್ಹೋತ್ರಾ ನಿರ್ದೇಶನದ ಈ ಚಿತ್ರದ ಪೋಸ್ಟರ್ ಗಳು ಈಗಾಗಲೇ ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿವೆ.
ಇತ್ತೀಚೆಗೆ ಬುಧವಾರ (ಜೂನ್ 22) ಚಿತ್ರದ ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ಐತಿಹಾಸಿಕ ಹಿನ್ನೆಲೆಯುಳ್ಳ ಆಕ್ಷನ್ ಸೀಕ್ವೆನ್ಸ್ನೊಂದಿಗೆ ಈ ಟೀಸರ್ ಉದ್ದಕ್ಕೂ ಕುತೂಹಲಕಾರಿಯಾಗಿದೆ.
ರಣಬೀರ್ ಅವರ ನಟನೆ ಮತ್ತು ಹೋರಾಟದ ಯೋಧನಾಗಿ ಮತ್ತು ತನ್ನ ವರ್ಗವನ್ನು ಅಪಾಯದಿಂದ ರಕ್ಷಿಸುವ ನಾಯಕನಾಗಿ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಸಿನಿಮಾದಲ್ಲಿ ಸಂಜಯ್ ದತ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ.
ಶುಕ್ರವಾರ (ಜೂನ್ 24) ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಲು ತಯಾರಕರು ಸಿದ್ಧರಾಗಿದ್ದಾರೆ, ಈ ಸಿನಿಮಾ ಜುಲೈ 22 ರಂದು ತೆರೆಗೆ ಬರಲಿದೆ.