ಟಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿಯಾಗಿ ಮೆರೆಯುತ್ತಿರುವ ರಶ್ಮಿಕಾಗೆ ಟಾಲಿವುಡ್ ನಲ್ಲೂ ಬೇಡಿಕೆ ಕಮ್ಮಿಯಿಲ್ಲ.. ಕನ್ನಡದಿಂದ ಔಟ್ ಡೇಟೆಡ್ ಆಗಿದ್ದರೂ ಬಾಲಿವುಡ್ ನಲ್ಲಿಯೂ ಮಿಂಚುತ್ತಿದ್ದಾರೆ.. ಬಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡ್ತಿದ್ಧಾರೆ.. ಕನ್ನಡ ಸಿನಿಮಾರಂಗದಿಂದ ಹಿಟ್ ಆದವರು.. ಸದ್ಯ ಕನ್ನಡ ಸಿನಿಮಾರಂಗದಿಂದ ದೂರವಿದ್ದಾರೆ..
ಅಂದ್ಹಾಗೆ ತಮಿಳಿನಲ್ಲಿ ವಿಜಯ್ ಅವರ 66 ನೇ ಸಿನಿಮಾದಲ್ಲಿ ರಶ್ಮಿಕಾ ನಾಯಕಿ ಅನ್ನೋದು ಎಲ್ರಿಗೂ ಗೊತ್ತಿದೆ..
ನಟಿ ರಷ್ಮಿಕಾ ಮಂದಣ್ಣ ಪ್ರಸ್ತುತ ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ.
ತೆಲುಗು, ತಮಿಳು ಸಿನಿಮಾಗಳಲ್ಲಿ ಅಲ್ಲದೇ ಹಿಂದಿಯಲ್ಲೂ ಕೂಡ ಸಿನಿಮಾಗಳನ್ನು ಮಾಡುತ್ತಿದ್ದಾರೆ.
ಇಲ್ಲಿಯವರಗೆ ಆಕೆ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಸಿನಿಮಾದಲ್ಲಿ ನಟಿಸಿದ್ದು, ಮಿಷನ್ ಮಜ್ನು ರಿಲೀಸ್ ಗೆ ಸಿದ್ಧವಾಗಿದೆ.
ಶೀಘ್ರದಲ್ಲಿಯೇ ಮತ್ತೊಂದು ಸಿನಿಮಾ ಗುಡ್ ಬೈ ಪ್ರೇಕ್ಷಕರ ಮುಂದೆ ಬರಲಿದೆ.
ಇದಕ್ಕೆ ಸಂಬಂಧಿಸಿದ ಮ್ಯೂವಿ ಶೂಟಿಂಗ್ ಪೂರ್ಣಗೊಂಡಿದೆ.
ಈ ವಿಷಯವನ್ನು ರಷ್ಮಿಕಾ ತಿಳಿಸುತ್ತಾ ಸೋಶಿಯಲ್ ಮೀಡಿಯಾದಲ್ಲಿ ಒಂದು ಫೋಟೋ ಶೇರ್ ಮಾಡಿದ್ದಾರೆ,
ಗುಡ್ ಬೈ ಸಿನಿಮಾಗೆ ಗುಡ್ ಬೈ ಹೇಳಲು ನನಗೆ ಇಷ್ಟ ಇಲ್ಲ. ಬಚ್ಚನ್ ಸರ್ ಜೊತೆ ಸಿನಿಮಾ ಮಾಡಲು ಅವಕಾಶ ಸಿಕ್ಕಿದ್ದಕ್ಕಾಗಿ ತುಂಬಾ ಅದೃಷ್ಠ ಎಂದು ಭಾವಿಸುತ್ತೇನೆ.
ಪ್ರಪಂಚದಲ್ಲಿ ಅವರು ಅತ್ಯುತ್ತಮ ವ್ಯಕ್ತಿ. ಇಂತಹ ಒಳ್ಳೆಯ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಟ್ಟಿದ್ದಾಕ್ಕಾಗಿ ನಿರ್ದೇಶಕ ವಿಕಾಶ್ ಬಹಾಲ್ ಅವರಿಗೆ ಧನ್ಯವಾದಗಳು.
ನನ್ನನ್ನ ಯಾಕೆ ಈ ಸಿನಿಮಾದಲ್ಲಿ ತೆಗೆದುಕೊಂಡರೋ ಆ ದೇವರಿಗೆ ಗೊತ್ತಾಗಬೇಕು. ನೀವು ಹೆಮ್ಮೆ ಪಡುವ ರೀತಿಯಲ್ಲಿ ನಾನು ನಟಿಸಿದ್ದೇನೆ ಎಂದು ಭಾವಿಸುತ್ತೇನೆ.
ಗುಡ್ ಬೈ ಸಿನಿಮಾ ನೋಡಲು ಎಲ್ಲರೂ ರೆಡಿಯಾಗಿರಿ ಎಂದು ಇನ್ ಸ್ಟಾದಲ್ಲಿ ಬರೆದುಕೊಂಡಿದ್ದಾರೆ.