ಕಳೆದ ವರ್ಷ ಡಿಸೆಂಬರ್ 17 ರಂದು ಬಿಡುಗಡೆಯಾದ ಪುಷ್ಪ ( Pushpa ) ಸಿನಿಮಾಗೆ ಆರಂಭದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ, ದಿನ ಕಳೆದಂತೆ ಪುಷ್ಪ ಮೇನಿಯಾ ಜೋರಾಯ್ತು. ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿ 400 ಕೋಟಿ ಕಲೆಕ್ಷನ್ ಕ್ಲಬ್ ಗೆ ಸೇರಿತು.
ಮುಖ್ಯವಾಗಿ ಬಾಲಿವುಡ್ ನಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಬಿ ಟೌನ್ ನಲ್ಲಿ ಭಾರಿ ಸದ್ದು ಮಾಡಿತ್ತು. ಇದೀಗ ಸಿನಿಮಾದ ಸೀಕ್ವೆಲ್ ಪುಷ್ಪ 2 ಶೂಟಿಂಗ್ ನಲ್ಲಿ ತಂಡ ಬ್ಯುಸಿಯಾಗಿದೆ.. ಈ ನಡುವೆ ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಇದೀಗ ‘ಪುಷ್ಪ 2’ ಸಿನಿಮಾಗೆ ಬೇಡಿಕೆ ಹೆಚ್ಚಿದೆ. ಅಷ್ಟೇ ಅಲ್ಲ KGF 2 ಹವಾ…!!! ಎಲ್ರಿಗೂ ಗೊತ್ತಿದೆ..ಬಾಕ್ಸ್ ಆಫೀಸ್ ನಲ್ಲಿ ಯಾವ್ ರೇಂಜ್ ಗೆ ತೂಫಾನ್ ಎಬ್ಬಿಸಿದೆ ಅನ್ನೋದು ಎಲ್ರಿಗೂ ಗೊತ್ತೇ ಇದೆ..
ಇದೀಗ KGF 2 ರೇಂಜ್ ಗೆ ಸದ್ದು ಮಾಡಬೇಕು , ಅದರ ರೆಕಾರ್ಡ್ ಮುರಿಯಲು ಪುಷ್ಪ 2 ಅದ್ಧೂರಿಯಾಗಿ ತಯಾರಾಗಬೇಕಿದೆ..
ಅಂದ್ಹಾಗೆ ಸಿನಿಮಾದಲ್ಲಿ ಸಾಕಷ್ಟು ಬದಲಾವಣೆಗಳಾಗ್ತಿವೆ.. ಬಜೆಟ್ ಕೂಡ ಡಬಲ್ ಆಗಿದೆ.. ಸಿನಿಮಾದಲ್ಲಿ ರಶ್ಮಿಕಾ ಸಾಯೋ ಕ್ಲೈಮಾಕ್ಸ್ ಇದೆ ಹೀಗೆಲ್ಲಾ ಸುದ್ದಿ ಹರಿದಾಡ್ತಿದೆ.. ಈ ನಡುವೆಯೇ ಮತ್ತೊಂದು ದೊಡ್ಡ ಬದಲಾವಣೆಯಾಗಿದೆ.. ಅದೇನೆಂದ್ರೆ ಮಲಯಾಳಂನ ಸ್ಟಾರ್ ನಟ ಫಹಾದ್ ಫಾಸಿಲ್ ಪುಷ್ಪ 2 ಟೀಮ್ ನಿಂದ ಹೊರ ನಡೆದಿದ್ದಾರೆ ಎನ್ನಲಾಗ್ತಿದೆ…
ಹೌದು..! ‘ಪುಷ್ಪ’ ಮೊದಲ ಪಾರ್ಟ್‌ನಲ್ಲಿ ಭನ್ವರ್ ಸಿಂಗ್ ಶೇಕಾವತ್ ಪಾತ್ರದಲ್ಲಿ ಫಹಾದ್ ಫಾಸಿಲ್ ಮಿಂಚಿದ್ದರು. ಪಾರ್ಟ್ 2 ನಲ್ಲಿ ಅಲ್ಲು ಫಹಾದ್ ಟಕ್ಕರ್ ನೋಡಲು ಫ್ಯಾನ್ಸ್ ಕಾತರರಾಗಿದ್ದರು.. ಆದ್ರೀಗ ಫಹಾದ್ ಸಿನಿಮಾದಿಂದ ಹಹೊರಬಂದಿದ್ದಾರೆ ಎನ್ನಲಾಗ್ತಿದೆ..
ಇದಕ್ಕೆ ಕಾರಣ ವಿಜಯ್ ಸೇತುಪತಿ ಎನ್ನಲಾಗ್ತಿದೆ..
ಹೌದು..! ವರ್ಸಟೈಲ್ ಆಕ್ಟರ್ ವಿಜಯ್ ಸೇತಪುತಿ ಸೌತ್ ಇಂಡಸ್ಟ್ರಿಯ ಟಾಪ್ ಸಿನಿಮಾಗಳಲ್ಲಿ ವಿಲ್ಲನ್ ಆಗಿ ಇತ್ತೀಚೆಗೆ ಮಿಂಚುತ್ತಿದ್ದಾರೆ.. ಈ ಸಿನಿಮಾದಲ್ಲೂ ಅವರನ್ನ ಕರೆತರಲಾಗ್ತಿದೆ ಎನ್ನಲಾಗಿದೆ.. ಅವರನ್ನ ಕರೆತರುತ್ತಿರುವುದಕ್ಕೆ ಫಹಾದ್ ಸಿನಿಮಾದಿಂದ ಹೊರನಡೆದಿದ್ದಾರೆ ಎನ್ನಲಾಗ್ತಿದೆ..
ಮೂಲಗಳ ಪ್ರಕಾರ ಭಾಗ ಒಂದರಲ್ಲಿ ಫಹಾದ್ ಬದಲಾಗಿ ವಿಜಯ್ ಸೇತುಪತಿ ನಟಿಸಬೇಕಿತ್ತು.. ಆದ್ರೆ ಆಗ ವಿಜಯ್ ಅವರ ಈ ಪಾತ್ರವನ್ನ ತಿರಸ್ಕಕರಿಸಿದ್ದರು ಎನ್ನಲಾಗಿತ್ತು… ಈಗ ಭಾಗ ಇರೆಡರಲ್ಲಿ ಅವರು ಕಾಣಿಸಿಕೊಳ್ತಾರೆ ಎಂಬ ಸುದ್ದಿ ಹರಿದಾಡ್ತಿದೆ.. ಆದ್ರೆ ಈ ಊಹಾಪೋಹಳಿಗೆ , ಗೊಂದಲಗಳಿಗೆ ಶೀಗ್ರವೇ ಸಿನಿಮಾ ತಂಡ ತೆರೆ ಎಳೆಯಬೇಕಿದೆ..