ಭಾರತೀಯ ಸಿನಿಮಾರಂಗದ ಬಹುನಿರೀಕ್ಷೆಯ ಕಿಚ್ಚ ಸುದೀಪ್ ನಟನೆಯ ಪ್ಯಾನ್ ವರ್ಲ್ಡ್ ಸಿನಿಮಾ ವಿಕ್ರಾಂತ್ ರೋಣದ ರಾರಾ ರಕ್ಕಮ್ಮ ಸಾಂಗ್ ಯಾವ್ ಲೆವೆಲ್ ಗೆ ಕ್ರೇಜ್ ಕ್ರಿಯೇಟ್ ಮಾಡಿದೆ ಎಲ್ರಿಗೂ ಗೊತ್ತೇ ಇದೆ..
ಆ ನಂತರದಲ್ಲಿ ಟ್ರೇಲರ್ ರಿಲೀಸ್ ಆಗಿದೆ.. 3 ಡಿ ಯಲ್ಲಿ ಮೂಡಿ ಬರುತ್ತಿರುವ ಸಿನಿಮಾದ ಟ್ರೇಲರ್ ನೋಡಿದ್ರೆ ಇದು ಯಾವ ಹಾಲಿವುಡ್ ಸಿನಿಮಾಗೂ ಕಡಿಮೆಯಿಲ್ಲವೆಂಬಂತೆ ಇದೆ.. ಇತ್ತೀಚೆಗೆ ಸಿನಿಮಾದ ಮೂರನೇ ಹಾಡು ಸಹ ರಿಲೀಸ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡ್ತಿದೆ..

ಅನುಪ್ ಭಂಡಾರಿ ನಿರ್ದೇಶನದ ಈ ಚಿತ್ರವು ಹೊಸ ಕ್ರೇಜ್ ಹುಟ್ಟುಹಾಕಲು ಹೊರಟಿದೆ.. ಅಂದ್ಹಾಗೆ ಈ ಸಿನಿಮಾವನ್ನ ಸಲ್ಮಾನ್ ಖಾನ್ ಅವರು ಇಷ್ಟ ಪಟ್ಟಿದ್ದು , ಸಿನಿಮಾತಂಡದ ಜೊತೆಗೆ ಸಹಕರಿಸಿದಕ್ಕೆ ಖುಷಿಯಾಗಿದ್ದಾರೆಂದು ಕಿಚ್ಚ ಸುದೀಪ್ ಅವರು ತಿಳಿಸಿದ್ದಾರೆ..
55 ದೇಶಗಳಲ್ಲಿ 15 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಕನ್ನಡದ ಸ್ಟಾರ್ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಅವರ ವೃತ್ತಿಜೀವನದ ಅತಿದೊಡ್ಡ ಚಿತ್ರವಾಗಿದೆ. ಈ 3D ಫ್ಯಾಂಟಸಿ ಥ್ರಿಲ್ಲರ್ ಕನ್ನಡ ಚಿತ್ರಗಳಿಗೆ ಮಾತ್ರವಲ್ಲದೆ ಭಾರತೀಯ ಚಿತ್ರರಂಗಕ್ಕೆ ಒಂದು ಮಹತ್ವದ ತಿರುವು ನೀಡಲಿದೆ.