KGF 2 : Zee ವಾಹಿನಿಯಲ್ಲಿ ಕೆಜಿಎಫ್ 2 ಅಬ್ಬರ
ಯಶ್ ಅವರ ಕೆಜಿಎಫ್ 2 ಬಾಕ್ಸ್ ಆಫೀಸ್‌ನಲ್ಲಿ ಎಬ್ಬಿಸಿದ ತೂಫಾನ್ ಪ್ರಭಾವ ಕಡಿಮೆಯಾಗಿರಬಹುದು.. ಆದ್ರೆ ಕ್ರೇಜ್ ಇನ್ನೂ ಇದೆ.. ಹೀಗಾಗಿಯೇ KGF 3 ಅಪ್ ಡೇಟ್ಸ್ ಗಾಗಿ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಡಿಮ್ಯಾಂಡ್ ಮಾಡ್ತಲೇ ಇರುತ್ತಾರೆ.. ಕೆಜಿಎಫ್ 3 ಗಾಗಿ ಕಾಯ್ತಿರುವುದೇ ಸಾಕ್ಷಿ..
ಸಿನಿಮಾ ಒಟಿಟಿಯಲ್ಲೂ ಭರ್ಜರಿ ಸೌಂಡ್ ಮಾಡಿದೆ.. ಇದೀಗ ಟಿವಿಯಲ್ಲಿ ರಾಕಿ ಭಾಯ್ ಅಬ್ಬರಿಸುವ ಸಮಯ..
ಹೌದು..! ಜೀ ಕನ್ನಡ ವಾಹಿನಿಯಲ್ಲಿ ‘KGF ಚಾಪ್ಟರ್ 2’ ಸಿನಿಮಾ ಪ್ರಸಾರವಾಗಲಿದೆ. ಈ ಬಗ್ಗೆ ಜೀ ಕನ್ನಡ ವಾಹಿನಿ ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಘೋಷಿಸಿದೆ.
’ಪ್ರಪಂಚದಲ್ಲಿರುವ ಬಂಗಾರನೆಲ್ಲ ಅಮ್ಮನಿಗೆ ತಂದುಕೊಡೋ ಧೀರ ಸುಲ್ತಾನ ನಿಮ್ಮನೆ ಪರದೆಯಲ್ಲೂ ಬರ್ತಿದ್ದಾನೆ…. KGF2 ಸಿನಿಮಾ ಅತೀ ಶೀಘ್ರದಲ್ಲಿ’’ ಎಂದು ಜೀ ವಾಹಿನಿ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದೆ. ಆದರೆ KGF2 ಸಿನಿಮಾದ ಪ್ರಸಾರ ದಿನಾಂಕ ಹಾಗೂ ಸಮಯದ ಬಗ್ಗೆ ಮಾಹಿತಿ ಇನ್ನೂ ಹೊರಬಂದಿಲ್ಲ.
ಒಟ್ಟಾರೆಯಾಗಿ 1250 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಸ್ಯಾಂಡಲ್ ವುಡ್ ಪಾಲಿಗೆ ಹೊಸ ಇತಿಹಾಸ ಸೃಷ್ಟಿಸಿತ್ತು. ಇಡೀ ಭಾರತದಲ್ಲಿ ಅತಿ ಹೆಚ್ಚು ಸಾರ್ವಕಾಲಿಕ ಕಲೆಕ್ಷನ್ ಮಾಡಿದ ಚಿತ್ರಗಳ ಪೈಕಿ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಮೂರನೇ ಸ್ಥಾನ ಪಡೆದಿದೆ.