ಸೌತ್ ಸಿನಿಮಾ ಇಂಡ್ಸ್ಟರಿಲ್ಲಿ ಮಿಂಚಿದ ಅದ್ರಲ್ಲೂ ಟಾಲಿವುಡ್ ನಲ್ಲಿ ದಶಕಗಳ ಕಾಲ ಮೆರೆದ ಅನುಷ್ಕಾ ಈಗಲೂ ಕ್ವೀನ್.. ಬಹುಬೇಡಿಕೆಯ ನಟಿ , ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಅನುಷ್ಕಾ ಹೀರೋ ಓರಿಯೆಂಟೆಡ್ ಸಿನಿಮಾಗಳಲ್ಲೂ ಬಬ್ಲಿಯಾಗಿ , ಸ್ಟ್ರಾಂಗ್ ಪಾತ್ರಗಳು ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದಾರೆ.. ಜೊತೆಗೆ ಅರುಂಧತಿ , ಭಾಗಮತಿ , ಪಂಚಾಕ್ಷರಿ ಅಂತಹ ಮಹಿಳಾ ಪ್ರಧಾನ ಹಾಗೂ ಪವರ್ ಫುಲ್ ಪಾತ್ರಗಳಲ್ಲಿ ನಟಿಸಿ ಸಿನಿಮಾ ಸೂಪರ್ ಹಿಟ್ ಆಗಿಸಿರುವ ಲೇಡಿ ಸೂಪರ್ ಸ್ಟಾರ್ ಕೂಡ..
47 ಚಿತ್ರಗಳಲ್ಲಿ ನಟಿಸಿರುವ ಸ್ವೀಟಿ , ಬಾಹುಬಲಿ ಸಿನಿಮಾ ಮೂಲಕ ಅತಿ ಹೆಚ್ಚು ಪ್ರಸಿದ್ಧಿ ಪಡೆದು ದೇಶಾದ್ಯಂತ ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿಕೊಂಡರು,.
ಅನುಷ್ಕಾ ಶೆಟ್ಟಿಯನ್ನ ಸ್ವೀಟಿ ಅಂತ ಕರೆಯೋದು ಅವರ ಬ್ಯೂಟಿಗೆ ಅಂತ ಅಂದ್ರೂ ಅದು ತಪ್ಪಲ್ಲವಾದ್ರೂ ಸ್ವೀಟಿ ಅಂತ ಕರೆಯೋದಕ್ಕೆ ಮುಖ್ಯ ಕಾರಣವೇ.. ಅನುಷ್ಕಾ ವಿನಮ್ರ ಸ್ವಭಾವ… ಅವರ ನಡೆ ಅವರ ನಡಿ , ಅವರ ಸ್ವೀಟ್ ವ್ಯಕ್ತಿತ್ವ ,, ಅವರ ಸರಳತೆಗೆ..
ಎಷ್ಟೇ ಸಾಧನೆ ಮಾಡಿದ್ರೂ ಅವರ ಮುಖದಲ್ಲಿ ಸರಳತೆ ಸದಾ ಎದ್ದು ಕಾಣುತ್ತೆ.. ಯಾವುದೇ ಈವೆಂಟ್ ಗೆ ಹೋದರೂ ಸರಳತೆಯಿಂದಲೇ ಎಲ್ಲರ ಮನಗೆಲ್ಲುತ್ತಾರೆ.,.
ಅಂದ್ಹಾಗೆ ಅನುಷ್ಕಾಗೆ 40 ವರ್ಷ ಸಮೀಪಿಸುತ್ತಿದೆ.. ಇನ್ನೂವರೆಗೂ ಮದುವೆಯಾಗಿಲ್ಲ.. ಹೀಗಾಗಿ ಅವರ ಮದುವೆ ಯಾವಾಗ ಎಂದು ಅಭಿಮಾನಿಗಳು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡ್ತಲೇ ಇರುತ್ತಾರೆ..
ಇದೀಗ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿರುವಂತೆ ಕಾಣ್ತಿದೆ… ಮುಂದಿನ ವರ್ಷವೇ ಅನುಷ್ಕಾ ಶೆಟ್ಟಿ ಮದುವೆ ಎನ್ನಲಾಗ್ತಿದೆ..
ಅಂದ್ಹಾಗೆ ಮದುವೆ ಬಗ್ಗೆ ಅನುಷ್ಕಾ ಮಾತನಾಡಿಲ್ಲ ಬದಲಾಗಿ ಖ್ಯಾತ ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ..
ಅವರ ಭವಿಷ್ಯದ ಪ್ರಕಾರ ಅನುಷ್ಕಾ ಅವರು ಚಿತ್ರರಂಗದ ವ್ಯಕ್ತಿಯನ್ನು ಮದುವೆಯಾಗಲ್ಲ ಎಂದಿದ್ದಾರೆ. ಸಿನಿಮಾ ಇಂಡಸ್ಟ್ರಿಗೆ ಸಂಬಂಧವೇ ಇಲ್ಲದವರನ್ನು ಅನುಷ್ಕಾ ಮದುವೆಯಾಗುವುದು ಖಂಡಿತ ಎಂದಿದ್ದಾರೆ. 2023ರ ಮೊದಲು ಅನುಷ್ಕಾ ಮದುವೆಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಅಲ್ಲದೇ ಅನುಷ್ಕಾ ಬೆಂಗಳೂರಿನ ಕೈಗಾರಿಕೋದ್ಯಮಿಯೊಬ್ಬರನ್ನು ಮದುವೆಯಾಗಲಿದ್ದಾರೆ. ಅರೇಂಜ್ ಮ್ಯಾರೇಜ್ ಆಗಲಿದ್ದಾರೆ ಎಂದಿದ್ಧಾರೆ..