ಶಕೀರಾ… ಸ್ಪೇನ್ ನ ಫೇಮಸ್ ಸಿಂಗರ್ ಶಕೀರಾ ವಿಶ್ವಾದ್ಯಂತ ಫ್ಯಾನ್ಸ್ ಗಳನ್ನ ಗಳಿಸಿದ್ದಾರೆ.. ಪಾಪ್ ಸಿಂಗರ್ ಆಗಿರೋ ಶಕೀರಾ ಅವರ ಶಕೀರಾ,,,, ಶಕೀರಾ ಹಾಡನ್ನಂತೂ ನೀವು ಬಹುಶಃ ಕೇಳಿಯೇ ಇರುತ್ತೀರಾ..
ಈ ಹಾಡು ಸಿಕ್ಕಾಪಟ್ಟೆ ಫೇಮಸ್… ಈ ಹಾಡನ್ನ ಹಾಡಿದವರು ಇದೇ ಲ್ಯಾಟಿನ್ ಗಾಯಕಿ ಶಕೀರಾ.. ಇನ್ನೂ ಇದು ಬಿಡಿ 2010 ರಲಲ್ಲಿ ಮೂಡಿಬಂದಿದ್ದ ವಕಾ ವಕಾ ಹಾಡು ಈಗಲೂ ಅಷ್ಟೇ ಫೇಮಸ್.. ಈ ಹಾಡು ವರ್ಲ್ಡ್ ವೈಡ್ ದೊಡ್ಡ ಸಂಚಲನವನ್ನೇ ಸೃಷ್ಟಿ ಮಾಡಿತ್ತು.. ಇದನ್ನ ಹಾಡಿದವರೂ ಕೂಡ ಶಕೀರಾ..
ಹೀಗೆ ಇಷ್ಟೆಲ್ಲಾ ವಿಶ್ವ ಖ್ಯಾತಿ ಗಳಿಸಿರುವ ಗಾಯಕಿಗೆ ಇದೀಗ ಕಾನೂನು ಸಂಕಷ್ಟ ಎದುರಾಗಿದೆ.. ಹೌದು..!!! ಆರ್ಥಿಕ ಅಪರಾಧದ ಆರೋಪ ಹೊತ್ತಿದ್ದಾರೆ ಶಕೀರಾ… ಸ್ಪೇನ್ನಲ್ಲಿ ಶಕೀರಾ ತೆರಿಗೆ ವಂಚನೆ ಮಾಡಿದ್ದಾರೆ ಎನ್ನಲಾಗಿದ್ದು , ಆರು ಆರ್ಥಿಕ ಅಪರಾಧಗಳನ್ನು ಎಸಗಿದ್ದಾರೆ ಎಂದು ಆರೋಪಿಸಲಾಗಿದೆ..
ಅಲ್ದೇ ಅವರನ್ನು 8 ವರ್ಷಗಳ ಜೈಲು ಶಿಕ್ಷೆಗೆ ಗುರಿಪಡಿಸಬೇಕು ಹಾಗೂ 180 ಕೋಟಿ ರುಪಾಯಿ (23 ಮಿಲಿಯನ್ ಡಾಲರ್) ದಂಡ ವಿಧಿಸಬೇಕು ಎಂದು ಸ್ಪೇನ್ ನ ನ್ಯಾಯಾಂಗ ಸಚಿವಾಲಯ ದಾವೆ ಹೂಡಿದೆ.
ಶಕೀರಾ, ಸ್ಪೇನ್ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪವನ್ನು ಹೊರಿಸಲಾಗಿದ್ದು, ವೈಯಕ್ತಿಕ ಆದಾಯ ತೆರಿಗೆ, ಆಸ್ತಿ ತೆರಿಗೆಗಳನ್ನು ಕಟ್ಟದೆ ವಂಚನೆ ಮಾಡಿದ್ದಾರೆ ಎನ್ನಲಾಗಿದೆ.
ಶಕೀರಾ, ಬಾರ್ಸಿಲೋನಾದ ಫುಟ್ಬಾಲ್ ಆಟಗಾರ ಜೆರಾರ್ಡ್ ಜೊತೆ ಪ್ರೀತಿಯಲ್ಲಿದ್ದಾಗ 2012 ರಿಂದ 2014 ರ ವರೆಗೆ ಬಾರ್ಸಿಲೋನಾದಲ್ಲಿ ಮನೆ ಖರೀದಿಸಿದ್ದರು. ಆದರೆ ಈ ಮನೆಗೆ ಆಸ್ತಿ ತೆರಿಗೆ ಹಾಗೂ ಇಲ್ಲಿದ್ದ ಎರಡು ವರ್ಷ ಅವರು ಆದಾಯ ತೆರಿಗೆ ಪಾವತಿಸಿಲ್ಲ ಎಂದು ಸ್ಪೇನ್ ಸರ್ಕಾರ ಆರೋಪಿಸಿದೆ. ಬಾರ್ಸಿಲೋನಾದಲ್ಲಿ ನೆಲೆಸಿದ್ದಾಗ ತೆರಿಗೆ ತಪ್ಪಿಸಿಕೊಳ್ಳಲೆಂದು ಆಕೆ ತಮ್ಮ ಅಧಿಕೃತ ನಿವಾಸ ಬಹಾಮಸ್ ನಲ್ಲಿದೆ ಎಂದು ಹೇಳಿದ್ದರು.
ಆದರೆ 2018 ರಲ್ಲಿ ಈ ಬಗ್ಗೆ ತನಿಖೆ ನಡೆಸಿದ ಸ್ಪೇನ್ ತೆರಿಗೆ ಇಲಾಖೆ, ಶಕೀರಾ ವಾಸವಿದ್ದ ಅವಧಿಯಲ್ಲಿ ಭೇಟಿ ನೀಡಿದ ಸ್ಥಳ, ಶಾಪಿಂಗ್, ಸಲೂನ್, ಆಸ್ಪತ್ರೆ ಇನ್ನಿತರೆ ಸ್ಥಳಗಳಿಗೆ ತೆರಳಿ ಬಿಲ್ ಗಳನ್ನು ಸಂಗ್ರಹಿಸಿ ಹಾಗೂ ಬಾರ್ಸಿಲೋನಾದಿಂದ ಹೊರಗೆ ಹೋದ ವಿಮಾನದ ಟಿಕೆಟ್ ಬುಕಿಂಗ್ಗಳನ್ನು ಆಧರಿಸಿ ಶಕೀರಾ ಸತತ 183 ದಿನಗಳು ಸ್ಪೇನ್ನಲ್ಲಿ ವಾಸವಿದ್ದರು ಎಂದಿದೆ.
ಸ್ಪೇನ್ನ ಕಾನೂನಿನ ಪ್ರಕಾರ ಆ ದೇಶದಲ್ಲಿ ಯಾರು 183 ದಿನ ವಾಸವಿರುತ್ತಾರೊ ಅವರು ಆ ದೇಶಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ.. ಹೀಗಾಗಿ ಸ್ಪೇಸ್ ಸರ್ಕಾರವು ಶಕೀರಾ 14 ಮಿಲಿಯನ್ 109 ಕೋಟಿ ತೆರಿಗೆ ಪಾವತಿಸಬೇಕು ಎಂದಿತ್ತು. ಕೆಲವು ರಿಯಾಯಿತಿಗಳನ್ನು ಸಹ ನೀಡುವುದಾಗಿ ಸರ್ಕಾರ ಹೇಳಿತ್ತು.
ಆದರೆ ಸರ್ಕಾರದ ರಿಯಾಯಿತಿ ಆಫರ್ ಅನ್ನು ತಿರಸ್ಕರಿಸಿದ ಶಕೀರಾ, ತಾವು ನ್ಯಾಯಾಲಯದಲ್ಲಿ ಹೋರಾಟ ಮಾಡುವುದಾಗಿ ಹೇಳಿದರು. ಅಂತೆಯೇ ಇದೀಗ ಸ್ಪೇನ್ ನ ನ್ಯಾಯಾಂಗ ಸಚಿವಾಲಯವು ಶಕೀರಾ ಸ್ಪೇನ್ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿದ್ದು, ಆಕೆಯ ಮೇಲೆ 180 ಕೋಟಿ ದಂಡ ಹಾಗೂ ಆಕೆಗೆ ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸುವಂತೆ ನ್ಯಾಯಾಲಯವನ್ನು ಕೋರಿದೆ. ಇನ್ನೂ ಕೆಲವೇ ದಿನಗಳಲ್ಲಿ ಶಕೀರಾ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಲಿದ್ದಾರೆ.. ಮತ್ತೊಂದೆಡೆ ಶಕೀರಾ ಫ್ಯಾನ್ಸ್ ಅವರಿಗೆ ಧೈರ್ಯ ತುಂಬುವ ಪ್ರಯತ್ನವನ್ನೂ ಸೋಷಿಯಲ್ ಮೀಡಿಯಾ ಮೂಲಕ ಮಾಡ್ತಿಇರೋದನ್ನ ಕಾಣಬಹುದಾಗಿದೆ..