Kangana Ranouth : ಬಾಯ್ಕಾಟ್ ಟಾರ್ಗೆಟ್ ಆದ್ರಾ ಕಂಗನಾ..?? ಆಗಿದ್ದೇನು..??
ಬಾಲಿವುಡ್ ನಲ್ಲಿ ಹೊಸದಾಗಿ ಏನೇ ನ್ಯೂಸ್ ಆದ್ರೂ ಅಲ್ಲಿ ನಟಿ ಕಂಗನಾ ರಣಾವತ್ ಅಭಿಪ್ರಾಯ ಇದ್ದೇ ಇರುತ್ತೆ. ಕಡ್ಡಿ ತುಂಡು ಮಾಡಿದಂತೆ ಮಾತನಾಡುವ ಶೈಲಿಯಿಂದ ಮೆಚ್ಚುಗೆ, ಟೀಕೆ ಎರಡಕ್ಕೂ ಒಳಗಾಗಿದ್ದಾರೆ… ಅಂದ್ಹಾಗೆ ವಿವಾದಕ್ಕೂ ಕಂಗನಾಗೂ ಅದೇನೋ ಅವಿನಾಭಾವ ಸಂಬಂಧವಿದೆ..
ಅಂದ್ಹಾಗೆ ಬಾಲಿವುಡ್ ನಲ್ಲಿ ಬಾಯ್ಕಾಟ್ ಮೇನಿಯಾ ಚಾಲ್ತಿಯಲ್ಲಿದೆ.. ಹಲವು ನಟರು ಬಾಯ್ಕಾಟ್ ಟಾರ್ಗೆಟ್ ಆಗಿದ್ದಾರೆ.. ಇತ್ತೀಚೆಗಿನ ಸಿನಿಮಾಗಳ ಬಗ್ಗೆ ಮಾತನಾಡಿದ್ರೆ , 83 , ಜೆರ್ಸಿ ಸಿನಿಮಾಗಳಿಗೂ ಬಾಯ್ಕಾಟ್ ಬಿಸಿ ತಟ್ಟಿತ್ತು.. ಈಗ ಅಮಿರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಬಾಯ್ಕಾಟ್ ಲಿಸ್ಟ್ ಸೇರಿದೆ.. ಬಾಯ್ಕಾಟ್ ಲಾಲ್ ಸಿಂಗ್ ಚಡ್ಡಾ , ಬಾಯ್ಕಾಟ್ ಬಾಲಿವುಡ್ , ಬಾಯ್ಕಾಟ್ ಅಮಿರ್ ಖಾನ್ ಟ್ರೆಮಡ್ ಆಗ್ತಿದೆ..
ಇದೀಗ ಕಂಗನಾ ರಣಾವತ್ ವಿರುದ್ಧ ಬಾಯ್ಕಾಟ್ ವಾರ್ ಶುರುವಾಗಿದೆ.. ಕಂಗನಾ ಈಗ ಬಾಯ್ಕಾಟ್ ಟಾರ್ಗೆಟ್ ಆಗಿದ್ದಾರೆ.. ಇತ್ತ ಬಿಜೆಪಿ ಜೊತೆಗೆ ಆತ್ಮೀಯತೆ ಹೊಂದಿರುವ ಅಕ್ಷಯ್ ಕುಮಾರ್ ನಟನೆಯ ರಕ್ಷಾ ಬಂಧನ ಸಿನಿಮಾಗೂ ಆಕ್ಷೇಪ ವ್ಯಕ್ತವಾಗ್ತಿದ್ದು , ಈ ಸಿನಿಮಾದ ಕಥೆ ಬರೆದವರು ಹಿಂದೂಗಳಿಗೆ ಅವಹೇಳನ ಮಾಡುವಂತಹ ಟ್ವಿಟ್ ಮಾಡಿದ್ದರು ಎನ್ನುವ ಕಾರಣಕ್ಕಾಗಿ ಈ ಸಿನಿಮಾವನ್ನೂ ಬೈಕಾಟ್ ಮಾಡಬೇಕು ಎಂಬ ತ್ತಾಯಗಳು ಬರುತ್ತಿವೆ.. ಇದಕ್ಕೆ ಕಂಗನಾ ರಣಾವತ್ ಕೂಡ ಧ್ವನಿ ಎತ್ತಬೇಕು ಎಂದು ಆಗ್ರಹಿಸುತ್ತಿದ್ದಾರೆ..