Liger review: ಸೆನ್ಸಾರ್ ಮಂಡಳಿಯನ್ನ ಅಚ್ಚರಿಗೊಳಿಸಿದ “ಲೈಗರ್”
ಈ ವರ್ಷದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ಪುರಿ ಜಗನ್ನಾಥ್ ನಿರ್ದೇಶನದ ಲೈಗರ್ ಸಿನಿಮಾ ಮೊದಲ ಸಾಲಿನಲ್ಲಿದೆ. ಈ ಚಿತ್ರದ ಮೂಲಕ ವಿಜಯ್ ದೇವರಕೊಂಡ ಚೊಚ್ಚಲ ಭಾರಿಗೆ ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ.
ಲೈಗರ್ ಈ ತಿಂಗಳಾಂತ್ಯದಲ್ಲಿ ಬಿಡುಗಡೆಯಾಗುತ್ತಿದ್ದು, ಸೆನ್ಸಾರ್ ಮಂಡಳಿಯಿಂದ ಮೊದಲ ವಿಮರ್ಶೆ ಹೊರಬಿದ್ದಿದೆ. ಮೂಲಗಳ ಪ್ರಕಾರ ಚಿತ್ರಕ್ಕೆ U/A ಪ್ರಮಾಣ ಪತ್ರ ನೀಡಲಾಗಿದೆ. ಚಿತ್ರದ ರನ್ ಟೈಮ್ 2 ಗಂಟೆ 20 ನಿಮಿಷಗಳು ಎನ್ನಲಾಗಿದೆ..
ಬಾಲಿವುಡ್ ಲೈಫ್ ವರದಿ ಪ್ರಕಾರ, ವಿಜಯ್ ಮತ್ತು ಅನನ್ಯಾ ಪಾಂಡೆ ಅಭಿನಯದ ಲೈಗರ್, ಸೆನ್ಸಾರ್ ಮಂಡಳಿಯನ್ನು ಅಚ್ಚರಿಗೊಳಿಸಿದೆ. ಲೈಗರ್ನ ಎಲ್ಲಾ ಸ್ಟಾರ್ ನಟರು ತಮ್ಮ ಅಭಿನಯದಿಂದ ಸೆನ್ಸಾರ್ ಮಂಡಳಿ ಸದಸ್ಯರನ್ನು ಮೆಚ್ಚಿಸಿದ್ದಾರೆ. ಆದರೆ ವಿಜಯ್ ಅಭಿನಯದಿಂದ ಸೆನ್ಸಾರ್ ಮಂಡಳಿ ಸದಸ್ಯರು ಪ್ರಭಾವಿತರಾಗಿದ್ದಾರೆ. ವಿಜಯ್ ಅವರ ಪರಿಶ್ರಮ ಚಿತ್ರದ ಪ್ರತಿ ಫ್ರೇಮ್ ನಲ್ಲೂ ಕಾಣುತ್ತಿದೆ.
ಚಿತ್ರದಲ್ಲಿ ವಿಜಯ್ ಪಾತ್ರವನ್ನ ಪುರಿ ಜಗನ್ನಾಥ್ ಕ್ರಿಯೇಟ್ ಮಾಡಿರುವ ರೀತಿಯನ್ನ ಮಂಡಳಿಯು ಇಷ್ಟಪಟ್ಟಿದೆ. ವಿಜಯ್ ಅವರ ಡೈಲಾಗ್ ಡೆಲಿವರಿ, ತೊದಲುವಿಕೆ , ಬಾಡಿ ಲಾಂಗ್ವೇಜ್ ಗಳನ್ನ ಗಣನೆಗೆ ತೆಗೆದುಕೊಂಡಿದ್ದಾರೆ.
ರಮ್ಯಾ ಕೃಷ್ಣ ಅವರ ಪಾತ್ರ, ಮದರ್ ಸೆಂಟಿಮೆಂಟ್ ಮತ್ತು ವಿಜಯ್-ಅನನ್ಯ ನಡುವಿನ ಲವವ ಟ್ರಾಕ್ ಸೆನ್ಸಾರ್ ಮಂಡಳಿಗೆ ಇಷ್ಟವಾಗಿದೆ ಎಂದು ಬಾಲಿವುಡ್ ವರದಿಯಾಗಿದೆ.
ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಧರ್ಮ ಪ್ರೊಡಕ್ಷನ್ಸ್ ಮತ್ತು ಪುರಿ ಕನೆಕ್ಟ್ಸ್ ಬಂಡವಾಳದೊಂದಿಗೆ ಲೈಗರ್ ಆಗಸ್ಟ್ 25 ರಂದು ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.