BiggBoss Kannada Ott ಸೀಸನ್ ನ ಮೊದಲ ವಾರದಲ್ಲೇ ಸಾಕಷ್ಟು ಮನೆಯ ವಾತಾವರಣ ಬದಲಾಗಿದೆ.. ಒಂದೆಡೆ ಕಂಟೆಸ್ಟೆಂಟ್ ಗಳ ನಡುವೆ ಅಸಮಾಧಾನ , ಸ್ಪೂರ್ತಿ ಸೋನು ಗೌಡ ನಡುವೆ ಕೋಲ್ಡ್ ವಾರ ನಡೆಯುತ್ತಿದೆ.. ಅಲ್ದೇ ಇವರಿಬ್ಬರೂ ರಾಕೇಶ್ ಅಡಿಗನಿಗಾಗಿ ಕಿತ್ತಾಡ್ತಿದ್ದಾರೆ.. ಈ ಮೂವರ ನಡುವೆ ಟ್ರಯಾಂಗಲ್ ಲವ್ ಸ್ಟೋರಿ ದೆಯಾ ಹೀಗೆಲ್ಲಾ ಚರ್ಚೆಗಳು ಆರಂಭವಾಗಿದೆ.. ರಾಕೇಶ್ ಮತ್ತೆ ಸ್ಪೂರ್ತಿ ಆತ್ಮೀಯತೆ ನೋಡಿ ಈ ಜೋಡಿ ನಡುವೆ ಪ್ರೀತಿ ಪ್ರೇಮ ಹುಟ್ಟಿದ್ಯಾ ಎಂಬೆಲ್ಲಾ ಚರ್ಚೆಗಳ ನಡುವೆಯೇ ಇದೀಗ ಮನೆಯಲ್ಲಿ ಮತ್ತೊಂದು ಪ್ರೀತಿಯ ಗಾಸಿಪ್ ಹುಟ್ಟಿಕೊಂಡಿದೆ..
ಅದೇ ಸಾನಿಯಾ ಅಯ್ಯರ್ ಹಾಗೂ ರೂಪೇಶ್ ನಡುವೆ.. ಹೌದು ಪುಟ್ಟಗೌರಿ ಖ್ಯಾತಿಯ ಸಾನಿಯಾ , ನಟ ರೂಪೇಶ್ ನಡುವೆ ಲವ್ ಗಾಸಿಪ್ ಹರಿದಾಡ್ತಿದೆ.. ಸಾನಿಯಾ ಎಲ್ಲೇ ಹೋದರೂ ಅಲ್ಲಿಗೆ ರೂಪೇಶ್ ಹೋಗುತ್ತಿರೋದರಿಂದ ಸಾನಿಯಾ ಮೇಲೆ ರೂಪೇಶ್ ಗೆ ಲವ್ ಆಗಿದ್ಯಾ ಅನ್ನೋ ಚರ್ಚೆಗಳು ನಡೆಯುತ್ತಿವೆ..
ಒಂದೆಡೆ ರಾಕೇಶ್ ಸ್ಪೂರ್ತಿ ಜೊತೆಗೆ ಫ್ಲರ್ಟ್ ಮಾಡ್ತಿರುವಂತೆ ಕಾಣ್ತಿದೆ.. ಮತ್ತೊಂದೆಡೆ ಸೋನುಗೆ ರಾಕಿ ಮೇಲೆ ಫೀಲಿಂಗ್ಸ್ ಹುಟ್ಟಿದೆ.. ಇತ್ತ ರೂಪೇಶ್ ಗೆ ಸಾನಿಯಾ ಮೇಲೆ ಪ್ಯಾರ್ ಆಗಿರೋ ಹಾಗೆ ಕಾಣ್ತಿದೆ.. ಅಂದ್ಹಾಗೆ ಈಗಾಗಲೇ ಸಾನಿಯಾಗೆ ಒಮ್ಮೆ ಲವ್ ಫೇಲ್ಯೂರ್ ಆಗಿದೆ.. ಈ ಬಗ್ಗೆ ಅವರೇ ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡಿದ್ದಾರೆ..
ಮನೆಯಲ್ಲಿ ಯಾವಾಗಲೂ ರೂಪೇಶ್ ಸಾನಿಯಾ ಒಟ್ಟಿಗೆ ಕಾಣಿಸಿಕೊಳ್ತಾ ಇರುತ್ತಾರೆ.. ಮಾತನಾಡ್ತಾ ಇರುತ್ತಾರೆ.. ಹೀಗಾಗಿಯೇ ಮನೆಯಲ್ಲಿ ಹಾಗೂ ಸೋಷಿಯಲ್ ಮೀಡಿಯಾದಲ್ಲೂ ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬ ಗುಮಾನಿ ಶುರುವಾಗಿಬಿಟ್ಟಿದೆ..
ಅಂದ್ಹಾಗೆ ಈ ವದಂತಿ ಸಾನಿಯಾಗೂ ಗೊತ್ತಾಗಿದ್ದು.. ಅವರೇ ಖುದ್ದು ಈ ಬಗ್ಗೆ ಸ್ಪಷ್ಟನೆಯನ್ನ ಸಹ ನೀಡಿದ್ದಾರೆ.. ನಾನು, ರೂಪೇಶ್ ಒಳ್ಳೆಯ ಸ್ನೇಹಿತರಷ್ಟೇ , ನಮ್ಮಿಬ್ಬರ ನಡುವೆ ಇರೋದು ಪ್ರೀತಿ ಅಲ್ಲ ಸ್ನೇಹ.. ನನ್ನ ಹಾಗೂ ರೂಪೇಶ್ ನಡುವೆ ನೀವೆಲ್ಲಾ ಊಹಿಸಿರುವಂತಹ ಸಂಬಂಧವಿಲ್ಲ, ನಾವು ಜಸ್ಟ್ ಫ್ರೆಂಡ್ಸ್ ಎಂದು ಸ್ಪಷ್ಟನೆ ನೀಡಿದ್ದಾರೆ..