Jacqueline Fernanadiz : 250 ಕೋಟಿ ಹಗರಣ ಪ್ರಕರಣದಲ್ಲಿ ಆರೋಪಿ..!! ‘ರಕ್ಕಮ್ಮ’ಗೆ ಬಂಧನದ ಭೀತಿ..!!
ಕ್ರಮ ಹಣ ವರ್ಗಾವಣೆ ವಿಚಾರದಲ್ಲಿ ಸಿಲುಕಿಕೊಂಡಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಇತ್ತೀಗೆ ವಿಕ್ರಾಂತ್ ರೋಣದಲ್ಲಿ ಭರ್ಜರಿ ಸ್ಟೆಪ್ಸ್ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ.. ರಾ… ರಾ… ರಕ್ಕಮ್ಮ ಸಾಂಗ್ , ಸ್ಟೆಪ್ಸ್ ಸಖತ್ ಫೇಮಸ್ ಕೂಡ ಆಗಿದೆ.. ಸಿನಿಮಾ ಥಿಯೇಟರ್ ಗಳಲ್ಲಿ ಭರ್ಜರಿ ಪ್ರದರ್ಶನ ಕಾಣ್ತಿದೆ..
ಅಂದ್ಹಾಗೆ ಇದೀಗ ಜಾಕ್ವೆಲಿನ್ ಫರ್ನಾಂಡೀಸ್ ಗೆ ED ಸಂಕಷ್ಟ ಎದುರಾಗಿದೆ. 200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿಯನ್ನು ಆರೋಪಿಯನ್ನಾಗಿ ಮಾಡಲು ಇ ಡಿ ಸಿದ್ಧತೆ ನಡೆಸಿದೆ. ಜಾರಿ ನಿರ್ದೇಶನಾಲಯ ಬುಧವಾರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವ ಸಾಧ್ಯತೆ ಇದೆ. ಏಪ್ರಿಲ್ನಲ್ಲಿ ಜಾಕ್ವೆಲಿನ್ ಗೆ ಸೇರಿದ ಏಳು ಕೋಟಿಗೂ ಹೆಚ್ಚು ಆಸ್ತಿಯನ್ನ ಜಪ್ತಿ ಮಾಡಲಾಗಿತ್ತು.
ಈ ಪ್ರಕರಣದ ಪ್ರಮುಖ ಆರೋಪಿ ಸುಖೇಶ್ ಚಂದ್ರಶೇಖರ್ ಮತ್ತು ಜಾಕ್ವೆಲಿನ್ಗೆ ಇಬ್ಬರೂ ಸಂಬಂಧದಲ್ಲಿದ್ದರು. ಅವರ ಅನೇಕ ಖಾಸಗಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು, ನಂತರ ಇ ಡಿ ಜಾಕ್ವೆಲಿನ್ ಅವರನ್ನ ವಿಚಾರಣೆಗೆ ಕರೆದಿತ್ತು. ಇವರಿಬ್ಬರ ಪೋಟೋಗಳನ್ನ E D ಸಾಕ್ಷಿಯಾಗಿರಿಸಿದೆ. ರಾನ್ಬಾಕ್ಸಿ ಮಾಜಿ ಪ್ರಮೋಟರ್ ಪತ್ನಿಯರಿಂದ ಸುಕೇಶ್ 200 ಕೋಟಿ ರೂ ವಸೂಲಿ ಮಾಡಿದ ಆರೋಪವಿದೆ.
ಆದ್ರೆ ಈ ಪ್ರಕರಣದಲ್ಲಿ ಜಾಕ್ವೆಲಿನ್ ಬಂಧನ ಸದ್ಯಕ್ಕೆ ಸಾಧ್ಯವಿಲ್ಲ, ಏಕೆಂದರೆ ಇಡಿ ಇನ್ನೂ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿಲ್ಲ. ನ್ಯಾಯಾಲಯದ ವಿಚಾರಣೆಯ ನಂತರ ಬಂಧನವನ್ನು ಮಾಡಬಹುದು. ಆದರೆ, ಅವರನ್ನು ದೇಶದಿಂದ ಹೊರಗೆ ಹೋಗಲು ಇನ್ನೂ ಅನುಮತಿ ನೀಡಿಲ್ಲ.