Rashmika Mandanna : ನಾನೂ ಸ್ಟ್ರಗಲ್ ಮಾಡಿದ್ದೀನಿ , ರಾತ್ರೋ ರಾತ್ರಿ ಸ್ಟಾರ್ ಆದವಳಲ್ಲ : ಟ್ರೋಲರ್ಸ್ ಗೆ ರಶ್ಮಿಕಾ ಜವಾಬ್
ಕನ್ನಡದವರೇ ಆದ ರಶ್ಮಿಕಾ ಮಂದಣ್ಣರನ್ನ ಕನ್ನಡದವರೇ ದ್ವೇಷಿಸೋದು ಹೆಚ್ಚು.. ಅದಕ್ಕೆ ರಶ್ಮಿಕಾ ಅವರ ಕನ್ನಡದ ಮೇಲಿನ ಅಸಡ್ಡೆಯೇ ಕಾರಣ.. ರಶ್ಮಿಕಾ ರಾತ್ರೋ ರಾತ್ರಿ ಸ್ಟಾರ್ ಆದ ನಟಿ ಅಂತ ಹೀಯೋಳಿಸೋದೇ ಹೆಚ್ಚು..
ಇದೀಗ ರಶ್ಮಿಕಾ ಮಂದಣ್ಣ ಟ್ರೋಲ್ ಗಳಿಗೆ ಗರಂ ಆಗಿದ್ದಾರೆ.. ನಾನೂ ಸಹ ಎಲ್ಲಾ ಕಲಾವಿದರಂತೆಯೇ ಸ್ಟ್ರಗಲ್ ಮಾಡಿ ಬಂದಿರುವವಳೆ , ರಾತ್ರೋರಾತ್ರಿ ಸ್ಟಾರ್ ಆಗಿರುವಂತಹ ನಟಿಯಲ್ಲ. ಹಲವು ಭಾಷೆಗಳಲ್ಲಿ ನಟಿಸಿದ್ದೇನೆ.
ಅನೇಕ ನಟರ ಜೊತೆ ಕೆಲಸ ಮಾಡಿದ್ದೇನೆ. ಪ್ರತಿ ಸಿನಿಮಾದಲ್ಲೂ ಕಷ್ಟಪಟ್ಟಿದ್ದೇನೆ. ಈ ಯಶಸ್ಸಿನಲ್ಲಿ ನನ್ನ ಕಷ್ಟದ ಪಾಲೂ ಇದೆ ಎಂಬರ್ಥದಲ್ಲಿ ಪೋಸ್ಟ್ ಹಾಕಿ ಟ್ರೋಲಿಗರಿಗೆ ಉತ್ತರ ನೀಡಿದ್ದಾರೆ ಚಷ್ಮಾ ಸುಂದರಿ..
ಕಡಿಮೆ ಅವಧಿಯಲ್ಲಿ ಟಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್ ಆಗಿ ಬೆಳೆದ ನಟಿ ರಷ್ಮಿಕಾ ಮಂದಣ್ಣ. ಪ್ರಸ್ತುತ ಸತತ ಸಿನಿಮಾಗಳ ಮೂಲಕ ಬ್ಯೂಸಿಯಾಗಿರುವ ರಶ್ಮಿಕಾ ಸದ್ಯ ಹಿಂದಿಯಲ್ಲಿ ನಟಿಸುತ್ತಿದ್ದಾರೆ.
ಅವರು ನಟಿಸಿರುವ ಸಿದ್ದಾರ್ಥ್ ಮಲ್ಹೋಥ್ರಾ ಜೊತೆ ನಟಿಸಿರುವ ಮಿಷನ್ ಮಜ್ನು ರಿಲೀಸ್ ಗೆ ಸಿದ್ಧವಾಗಿದೆ.
ಶೀಘ್ರದಲ್ಲಿಯೇ ಗುಡ್ ಬೈ ಕೂಡ ಪ್ರೇಕ್ಷಕರ ಮುಂದೆ ಬರಲಿದೆ.
ಸಿನಿಮಾ ಮಾತ್ರವಲ್ಲದೇ ಸೋಶೀಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ರಶ್ಮಿಕಾ, ಆಗಾಗ ಟ್ರೆಂಡಿ ಡ್ರೆಸ್ ಗಳನ್ನು ಧರಿಸುತ್ತಾ ಟ್ರೆಂಡ್ ಆಗುತ್ತಲೇ ಇರುತ್ತಾರೆ.
ತಮಿಳಿನಲ್ಲಿ ದಳಪತಿ ವಿಜಯ್ 66 ಸಿನಿಮಾದಲ್ಲಿ ನಟಿಸುತ್ತಿರುವ ರಶ್ಮಿ ಪುಷ್ಪಪ 2 ನಲ್ಲೂ ಬ್ಯುಸಿಯಿದ್ದಾರೆ..
ಕನ್ನಡದ ಮೂಲಕ ಹೆಸರು ಗಳಿಸಿ ಪ್ರಸ್ತುತ ಟಾಲಿವುಡಡ್ ನಲ್ಲಿ ನೆಲೆಯೂರಿರುವ ರಶ್ಮಿಕಾ ಮಂದಣ್ಣ ಪುಷ್ಪ ಸಿನಿಮಾದ ಸಕಕ್ಸಸ್ ನಲ್ಲಿ ತೇಲಾಡ್ತಿದ್ದಾರೆ.. ಆದ್ರೆ ಇದೇ ಸಿನಿಮಾದ ವಿರುದ್ಧ ಈಗ ರಶ್ಮಿಕಾ ಅಭಿಮಾನಿಗಳು ಬೇಸರಗೊಂಡಿದ್ರೆ ಟ್ರೋಲಿಗರಿಗೆ ಟ್ರೋಲ್ ಮಾಡಲು ಕಂಟೆಂಟ್ ಗಳು ಸಿಗುತ್ತಿರುತ್ತವೆ.. ಹಾಗೆ ನೋಡಿದ್ರೆ ಅತಿ ಹೆಚ್ಚು ಟ್ರೋಲ್ ಆಗೋ ನಟಿ ರಶ್ಮಿಕಾ ಅಂದ್ರೂ ತಪ್ಪಾಗೋದಿಲ್ಲ..