Drushya 3 : ಮಾಲಿವುಡ್ ನಲ್ಲಿ ದೃಶ್ಯ 3 ಬರೋದು ಕನ್ ಫರ್ಮ್..!! ಖಚಿತಪಡಿಸಿದ ನಿರ್ಮಾಪಕ…!!!
ಎಲ್ಲಾ ಭಾಷೆಗಳಲ್ಲೂ ಸೂಪರ್ ಹಿಟ್ ಆಗಿರುವ ದೃಶ್ಯಂ ಸೀರೀಸ್ ನ ಮೂರನೇ ಸರಣಿ ಇದೀಗ ಮಾಲಿವುಡ್ ನಲ್ಲಿ ಬರುತ್ತಿರುವುದು ಪಕ್ಕಾ ಆಗಿದೆ…
ಹೌದು…! ಮೂಲತಃ ಮಾಲಿವುಡ್ ನ ಸಿನಿಮಾವಾದ ದೃಶ್ಯಂ ನ 2 ಸರಣಿಗಳು ಸೂಪರ್ ಹಿಟ್ ಆಗಿದೆ.. ಅಂತೆಯೇ ಕನ್ನಡದಲ್ಲಿ ರವಿಚಂದ್ರನ್ ಅಭಿನಯದ ದೃಶ್ಯ , ಹಿಂದಿಯಲ್ಲಿ , ತೆಲುಗಿನಲ್ಲೂ ಈ ಸಿನಿಮಾದ ರೀಮೇಕ್ ವರ್ಷನ್ಸ್ ಸೂಪರ್ ಹಿಟ್ ಆಗಿ ಆಗಿದೆ..
ಅಂದ್ಹಾಗೆ ಇದೀಗ ಮಾಲಿವುಡ್ ನಲ್ಲಿ ದೃಶ್ಯಂ 3 ಬರೋದು ಪಕ್ಕಾ ಆಗಿದೆ.. ಸೂಪರ್ ಸ್ಟಾರ್ ಮೋಹನ್ಲಾಲ್ ಅವರು 2013 ರಲ್ಲಿ ಮಲಯಾಳಂ ಕ್ರೈಮ್ ಥ್ರಿಲ್ಲರ್ ದೃಶ್ಯಂ ಮೂಲಕ ಜಾರ್ಜ್ ಕುಟ್ಟಿಯ ಪ್ರಪಂಚವನ್ನು ನಮಗೆ ಪರಿಚಯಿಸಿದರು.
2021 ರಲ್ಲಿ ದೃಶ್ಯಂ 2 ನಲ್ಲಿ ಪ್ರಯಾಣವನ್ನು ಮುಂದುವರೆಸಿದರು… ಅಂದಿನಿಂದ ಸಿನಿ ರಸಿಕರು 3 ನೇ ಭಾಗಕ್ಕಾಗಿ ಡಿಮ್ಯಾಂಡ್ ಮಾಡ್ತಿದ್ದರು.. ದಕ್ಷಿಣ ನಿರ್ಮಾಪಕ ಆಂಟೋನಿ ಪೆರುಂಬವೂರ್ ಇತ್ತೀಚೆಗೆ ಪ್ರಶಸ್ತಿ ಸಮಾರಂಭದಲ್ಲಿ ಸೀಕ್ವೆಲ್ ಅನ್ನು ಖಚಿತಪಡಿಸಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದ ಕ್ಲಿಪ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಮೋಹನ್ಲಾಲ್ ಹೊರತುಪಡಿಸಿ, ಮೀನಾ, ಅನ್ಸಿಬಾ ಹಾಸನ್ ಮತ್ತು ಎಸ್ತರ್ ಅನಿಲ್ ಸಹ ಸಿನಿಮಾದಲ್ಲಿ ಪ್ರಮುಖ ಪ್ರಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ..