ಶಾರುಖ್ ಖಾನ್ ಗೆ ಸಿನಿಮಾ ಮಾಡಲಿದ್ಯಾ ಹೊಂಬಾಳೆ ಫಿಲ್ಮ್ಸ್..!??
( Hombale Films) ಹೊಂಬಾಳೆ ಫಿಲಮ್ಸ್… KGF ನಂತಹ ಸಿನಿಮಾ ಮೂಲಕ ಕನ್ನಡ ಇಂಡಸ್ಟ್ರಿ ಪವರ್ ಅನ್ನ ಇಡೀ ಭಾರತಕ್ಕೆ ತೋರಿಸಿದ ಸಿನಿಮಾ ನಿರ್ಮಾಣ ಸಂಸ್ಥೆ.. ಸದ್ಯ ಸಲಾರ್ , ಕಾಂತಾರಾದಂತಹ ಸಿನಿಮಾಗಳಿಗೂ ಬಂಡವಾಳ ಹೂಡಿದ್ದು ಈ ಸಿನಿಮಾಗಳು ರಿಲೀಸ್ ಆಗಬೇಕಿವೆ.. ಕಾಂತಾರಾ ಇನ್ನೇನು ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಲಿದೆ..
ಸದ್ಯ ತೆಲುಗು , ತಮಿಳು , ಮಲಯಾಳಂ ನಲ್ಲೂ ಸಿನಿಮಾಗಳನ್ನ ನಿರ್ಮಿಸುವ ಪ್ಲಾನ್ ನಲ್ಲಿರೋ ಹೊಂಬಾಳೆ ಫಿಲಮ್ಸ್ ನಿರ್ಮಾಣ ಸಂಸ್ಥೆ ಇದೀಗ ಬಾಲಿವುಡ್ ನ ಕಿಂಗ್ ಖಾನ್ ಸಿನಿಮಾಗೆ ಬಂಡವಾಳ ಹೂಡಲಿದೆ ಎಂಬ ಸುದ್ದಿ ಭಾರೀ ಸದ್ದು ಮಾಡ್ತಿದೆ..
ಹೌದು..! ಹೊಂಬಾಳೆ ಫಿಲಮ್ಸ್ ನಿರ್ಮಾಣ ಸಂಸ್ಥೆ ಇದೀಗ ಶಾರುಖ್ ಖಾನ್ ಸಿನಿಮಾ ನಿರ್ಮಾಣ ಮಾಡಲಿದ್ಯಂತೆ.. ಹೀಗೊಂದು ಸುದ್ದಿ ಬಾಲಿವುಡ್ ಹಾಗೂ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಂಚಲನ ಸೃಷ್ಟಿ ಮಾಡಿದೆ..
ಅಂದ್ಹಾಗೆ ವದಂತಿಗಳ ಪ್ರಕಾರ ಸಿನಿಮಾ ತಂಡ ಈಗಾಗಲೇ ಶಾರುಖ್ ಖಾನ್ ಜೊತೆಗೆ ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿದ್ಯಂತೆ.. ಮುಂದಿನ ವರ್ಷದಿಂದ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ ಎನ್ನಲಾಗ್ತಿದೆ.. ಸದ್ಯ ಶಾರುಖ್ ಅಟ್ಲಿಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ..