Rashmika Mandanna : ನಾಚುತ್ತಾ ಅಭಿಮಾನಿ ಎದೆ ಮೇಲೆ ಆಟೋಗ್ರಾಫ್ ಹಾಕಿದ ರಶ್ಮಿಕಾ..!! Video
ಸ್ಯಾಂಡಲ್ ವುಡ್ ಮೂಲಕ ಕಿರಿಕ್ ಪಾರ್ಟಿ ಸಿನಿಮಾದಿಂದ ಹಿಟ್ ಆಗಿ ಸದ್ಯ ಟಾಲಿವುಡ್ , ಬಾಲಿವುಡ್ , ಕಾಲಿವುಡ್ ನಲ್ಲಿ ಮಿಂಚುತ್ತಿರುವ ರಶ್ಮಿಕಾ ಬ್ಯಾಕ್ ಟು ಬ್ಯಾಕ್ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.. ರಶ್ಮಿಕಾಗೆ ಡಿಮ್ಯಾಂಡ್ ಕೂಡ ಹೆಚ್ಚಾಗಿದ್ದು , ಸೌತ್ ನಟಿಯರ ಪೈಕಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪೈಕಿ ಒಬ್ಬರು..
ಇತ್ತೀಚೆಗೆ ಅಭಿಮಾನಿಯೋರ್ವ ರಶ್ಮಿಕಾ ಮಂದಣ್ಣ ಅವರ ಬಳಿ ತಮ್ಮ ಎದೆ ಮೇಲೆ ಆಟೋ ಗ್ರಾಫ್ ಹಾಕಿಸಿಕೊಂಡಿದ್ದು ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ..
ತಮ್ಮ ಮುಂಬರುವ ಚಿತ್ರ ‘ಗುಡ್ ಬೈ’ ಬಿಡುಗಡೆಗೆ ಸಜ್ಜಾಗುತ್ತಿರುವ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಹೆಚ್ಚು ಚರ್ಚೆಯಲ್ಲಿರುವ ನಟಿಯರ ಪೈಕಿ ಒಬ್ಬರಾಗಿದ್ದಾರೆ.,.
ನಟಿ ಅಭಿಮಾನಿಯ ಟೀ ಶರ್ಟ್ ಮೇಲೆ ಸಹಿ ಹಾಕಿದಾಗ ಆತ ಬಹಳ ಖುಷಿ ಪಟ್ಟಿದ್ದಾನೆ..
ಬಾಲಿವುಡ್ ನಲ್ಲಿ ರಶ್ಮಿಕಾ ನಟನೆಯ 2 ಸಿನಿಮಾಗಳು ಇನ್ನೇನು ರಿಲೀಸ್ ಆಗಬೇಕಿವೆ.. ಪ್ರಸ್ತುತ ರಣಬೀರ್ ಕಪೂರ್ ಜೊತೆಗೆ ಅನಿಮಲ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದು , ಮುಂದೆ ಸೂಪರ್ ಹಿಟ್ ಸಿನಿಮಾದ ಸರಣಿ ಆಶಿಕಿ 3 ನಲ್ಲಿ ಕಾರ್ತಿಕ್ ಆರ್ಯನ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ ಎಂದೂ ಕೂಡ ಹೇಳಲಾಗ್ತಿದೆ..
ಇತ್ತ ತಮಿಳಿನಲ್ಲಿ ದಳಪತಿ ವಿಜಯ್ 66 ನೇ ಸಿನಿಮಾದಲ್ಲಿ ನಟಿಸಿದ್ರೆ , ಪುಷ್ಪ 2 ಪ್ರಾಜೆಕ್ಟ್ ನಲ್ಲೂ ರಶ್ಮಿಕಾ ನಟಿಸಲಿದ್ದಾರೆ.. ಇದರ ಹೊರತಾಗಿ ಚಿಯಾನ್ ವಿಕ್ರಮ್ ಅವರ ಮುಂದಿನ ಸಿನಿಮಾಗೆ ರಶ್ಮಿಕಾ ನಾಯಕಿ ಎನ್ನಲಾಗ್ತಿದೆ..
ಈ ನಡುವೆ ಕರಣ್ ಜೋಹರ್ ನಿರ್ಮಿಸಿ ಟೈಗರ್ ಶ್ರಾಫ್ ನಟಿಸಬೇಕಿದ್ದ ಸಿನಿಮಾದಲ್ಲಿ ರಶ್ಮಿಕಾ ನಾಯಕಿ ಎನ್ನಲಾಗಿತ್ತು.. ಆದ್ರೆ ಸಿನಿಮಾ ಸೆಟ್ಟೇರುವ ಮುನ್ನವೇ ನಿಂರುಹೋಗಿದೆ..
View this post on Instagram