Sharukh Khan : 24 ವರ್ಷಗಳ ಬಳಿಕ ಮತ್ತೆ ಒಂದಾಗಲಿದ್ಯಾ ಶಾರುಖ್ – ಮಣಿರತ್ನಂ ಜೋಡಿ..!!
ಬಾಲಿವುಡ್ ನಲ್ಲಿ ಸಾಲು ಸಾಲು ಸಿನಿಮಾಗಳು ಫ್ಲಾಪ್ ಆಗುತ್ತಿರುವಾಗಲೇ ಒಂದು ಹೊಸ ಚೈತನ್ಯ ನೀಡಿದ್ದು ಬ್ರಹ್ಮಾಸ್ತ್ರ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದ್ದು , ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ..
ಆದ್ರೆ ಬ್ರಹ್ಮಾಸ್ತ್ರದ ಅಬ್ಬರ ಜಾಸ್ತಿ ದಿನ ನಡೆಯೋದಿಲ್ಲ.. ಕಾರಣ ಸಿಂಪಲ್ ಸೆಪ್ಟೆಂಬರ್ 30 ಕ್ಕೆ ವಿಶ್ವಾದ್ಯಂತ ಐದು ಭಾಷೆಗಳಲ್ಲಿ ಸ್ಟಾರ್ ನಿರ್ದೇಶಕ ಮಣಿರತ್ನಂ ಅವರ ನಿರ್ದೇಶನದ ಮಲ್ಟಿ ಸ್ಟಾರ್ ಸಿನಿಮಾ ಪೊನ್ನಿಯನ್ ಸೆಲ್ವನ್ ಭಾಗ 1 ರಿಲೀಸ್ ಆಗಲಿದೆ.. ಈ ಸಿನಿಮಾ ಬ್ರಹ್ಮಾಸ್ತ್ರದ ರೆಕಾರ್ಡ್ ಅನ್ನ ಕೆಲವೇ ದಿನಗಳಲ್ಲೇ ಧೂಳಿಪಟ್ ಮಾಡೋದ್ರಲ್ಲಿ ಡೌಟೇ ಇಲ್ಲ ಎನ್ನುತ್ತಿದ್ದಾರೆ ಸಿನಿಮಾಪಂಡಿತರು..
ಆದ್ರೆ ಈ ವಿಷ್ಯ ಬ್ರಹ್ಮಾಸ್ತ್ರ VS ಪೊನ್ನಿಯನ್ ಸೆಲ್ವನ್ ಅಲ್ಲ..
ಶಾರುಖ್ ಮತ್ತೆ ಪೊನ್ನಿಯನ್ ಕಾಂಬಿನೇಷನ್ ದೇ ಚರ್ಚೆ,…
ಹೌದು..!
ಬಾಲಿವುಡ್ ಮಂದಿ ಈಗ ತಮ್ಮ ಸಿನಿಮಾಗಳಿಗೆ ಸೌತ್ ಟಚ್ ನೀಡೋದಕ್ಕೆ ಸೌತ್ ಸಿನಿಮಾ ನಿರ್ದೇಶಕರು ನಟರ ಹಿಂದೆ ಬಿದ್ದಿರೋದು ಗೊತ್ತೇ ಇದೆ.. ಅಂತೆಯೇ ಮತ್ತೆ ಶಾರುಖ್ ಖಾನ್ ಪೊನ್ನಿಯನ್ ಸೆಲ್ವನ್ ಜೊತೆಗೆ ಸಿನಿಮಾ ಮಾಡಲಿದ್ದಾರೆ ಅನ್ನೋ ಸುದ್ದಿ ಭಾರೀ ಚರ್ಚೆುಯಾಗ್ತಿದೆ..
ಹೌದು..! ಶಾರುಖ್ ಮತ್ತು ಮಣಿರತ್ನಂ 24 ವರ್ಷಗಳ ನಂತರ ಚಿತ್ರಕ್ಕಾಗಿ ಮತ್ತೆ ಒಂದಾಗುತ್ತಿದ್ದಾರೆ..
ಮಣಿರತ್ನಂ ಅವರು ಶಾರುಖ್ ಖಾನ್ ಅವರೊಂದಿಗೆ ಮತ್ತೆ ಒಂದಾಗುವ ಸಾಧ್ಯತೆಯಿದೆ ಎನ್ನಲಾಗ್ತಿದೆ..
ಶಾರುಖ್ ಖಾನ್ ಮತ್ತು ಮೇವೆರಿಕ್ ಚಿತ್ರನಿರ್ಮಾಪಕ ಮಣಿರತ್ನಂ 1998 ರಲ್ಲಿ ಬಿಡುಗಡೆಯಾದ ರೋಮ್ಯಾಂಟಿಕ್ ಥ್ರಿಲ್ಲರ್ ಚಲನಚಿತ್ರ ದಿಲ್ ಸೇ… ನಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಈ ಚಿತ್ರವು ಬ್ಲಾಕ್ ಬಸ್ಟರ್ ಆಗಿ ಹೊರಹೊಮ್ಮಿತು ಮತ್ತು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಶಂಸೆಯನ್ನು ಗಳಿಸಿತು.
ಸಿನಿಮಾದಲ್ಲಿನ ಹಾಡುಗಳು ದೊಡ್ಡ ಕ್ರೇಜ್ ಸೃಷ್ಟಿ ಮಾಡಿತ್ತು..
1998 ರ ಚಲನಚಿತ್ರ ದಿಲ್ ಸೆ …, ಅಸ್ಸಾಂನಲ್ಲಿನ ದಂಗೆಯ ಹಿನ್ನೆಲೆಯಲ್ಲಿ ನಿರ್ಮಿಸಲಾಯಿತು, ಈ ಚಿತ್ರವು ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಆರು ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಒಳಗೊಂಡಂತೆ ಹಲವಾರು ಪ್ರಶಸ್ತಿಗಳನ್ನು ಪಡೆಯಿತು. ಶಾರುಕ್ ಜೊತೆಗೆ, ಈ ಚಿತ್ರದಲ್ಲಿ ಮನಿಶಾ ಕೊಯಿರಾಲಾ, ಪ್ರೀತಿ ಜಿಂಟಾ ಮತ್ತು ಮಲೈಕಾ ಅರೋರಾ ಕೂಡ ನಟಿಸಿದ್ದಾರೆ. ರಿಲೀಸ್ ಆಗಿ ಎರಡು ದಶಕಗಳೇ ಕಳೆದರೂ ಶಾರುಕ್ ಮತ್ತೆ ಮಣಿರತ್ನಂ ಜೋಡಿ ಯಾವುದೇ ಸಿನಿಮಾ ಮಾಡಿರಲಿಲ್ಲ..
ಇವರಿಬ್ಬರು ಮತ್ತೊಮ್ಮೆ ಯಾವಾಗ ಒಂದಾಗುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.
ಸಂದರ್ಶನವೊಂದ್ರಲ್ಲಿ ಮಾತನಾಡ್ತಾ ಮಣಿರತ್ನಂ ಶಾರುಖ್ ಖಾನ್ ಅವರೊಂದಿಗೆ ಮತ್ತೆ ಒಂದಾಗುವ ಸಾಧ್ಯತೆಯ ಬಗ್ಗೆ ಸುಳಿವು ನೀಡಿದರು.. ನೀವು ಶಾರುಖ್ ಅವರನ್ನು ಕೇಳಬೇಕು. ನಾನು ಅವರಿಗಾಗಿ ಸ್ಕ್ರಿಪ್ಟ್ ಅನ್ನು ಸಿದ್ಧಪಡಿಸಬೇಕು, ಆಗ ನಾನು ಅವರ ಬಳಿಗೆ ಹೋಗಬಹುದು. ಆದ್ದರಿಂದ ಇದೆಲ್ಲವೂ ಸ್ಕ್ರಿಪ್ಟ್‌ನ ಕಾರ್ಯವಾಗಿದೆ. ನಾವು ಒಂದು ಫಂಕ್ಷ ನ್‌ನಲ್ಲಿ ಒಬ್ಬರನ್ನೊಬ್ಬರು ಭೇಟಿಯಾಗಿದ್ದೇವೆ, ಅಷ್ಟೆ. ನಾನು ನಿಮಗೆ ಹೇಳುತ್ತಿರುವಂತೆ ಇದು ಸ್ಕ್ರಿಪ್ಟ್‌ನ ಕಲ್ಪನೆಯಿಂದ ನಡೆಸಲ್ಪಟ್ಟಿದೆ. ಶಾರುಖ್ ಸರಿ ಎಂದು ನಿಮಗೆ ಒಮ್ಮೆ ಆಲೋಚನೆ ಬಂದರೆ, ನಾನು ಹೋಗಿ ಅವರನ್ನು ಕೇಳುತ್ತೇನೆ ಎಂದಿದ್ದಾರೆ..