Vivek Agnihotri : ದುಬಾರಿ ಬೆಲೆಯ ಅಪಾರ್ಟ್ ಮೆಂಟ್ ಖರೀದಿಸಿದ The Kashmir Files ನಿರ್ದೇಶಕ..!!! ಬೆಲೆ ಕೇಳಿ ಉಬ್ಬೇರಿಸಿದ ನೆಟಿಜನ್ಸ್..!!
ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿ ಹೋತ್ರಿ ಅವರು ದುಬಾರಿ ಬೆಲೆಯ ಫ್ಲಾಟ್ ಖರೀದಿಸಿದ್ದು , ಈ ಫ್ಲಾಟ್ ನ ಬೆಲೆ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ..
ಮುಂಬೈನಲ್ಲಿ ಐಷಾರಾಮಿ ಫ್ಲಾಟ್ ಖರೀದಿಸಿದ್ದಾರೆ ಎನ್ನಲಾಗ್ತಿದೆ. ಅಲ್ಲದೇ ಈ ಫ್ಲಾಟ್ ನ ಬೆಲೆ 18 ಕೋಟಿ ರೂಪಾಯಿ ಎನ್ನಲಾಗ್ತಿದೆ..
ಬಹುತೇಕ ಸೆಲೆಬ್ರಿಟಿಗಳೇ ವಾಸವಾಗಿರುವ ಮುಂಬೈನ ಅಂಧೇರಿಯಲ್ಲಿ ಉಪನಗರದ ವರ್ಸೋವಾದಲ್ಲಿ ಪ್ರೀಮಿಯಂ ವಸತಿ ಅಪಾರ್ಟ್ಮೆಂಟ್ ಅನ್ನು ವಿವೇಕ್ ಅಗ್ನಿಹೋತ್ರಿ ಹಾಗೂ ಪತ್ನಿ ಪಲ್ಲವಿ ಜೋಷಿ ಸೇರಿ ಜಂಟಿಯಾಗಿ ಖರೀದಿಸಿದ್ದಾರೆ ಎನ್ನಲಾಗಿದೆ.
ಅಂದ್ಹಾಗೆ ಈ ಸಿನಿಮಾ ದೇಶಾದ್ಯಂತ ಸಂಚಲನವನ್ನೇ ಸೃಷ್ಟಿಸಿದ ಸಿನಿಮಾ ಅಂದ್ರೂ ತಪ್ಪಾಗೋದಿಲ್ಲ.. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ.. ದಿ ಕಾಶ್ಮೀರ್ ಫೈಲ್ಸ್ 300 ಕೋಟಿ ರೂ. ಗೂ ಅಧಿಕ ಕಲೆಕ್ಷನ್ ಮಾಡಿತ್ತು..
ಈ ಸಿನಿಮಾಗೆ ಹಾಗೂ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ.. ಸಿನಿಮಾಗೆ ಪರ ಅಷ್ಟೇ ಅಲ್ದೇ ವಿರೋಧಿ ಅಲೆಯೂ ಎದ್ದಿದ್ದು , ರಾಜಕೀಯವಾಗಿ ಚರ್ಚಾ ವಿಚಾರವೂ ಆಗಿತ್ತು..
ಮಾರ್ಚ್ 11 ರಂದು ಬಿಡುಗಡೆಯಾದ ಈ ಸಿನಿಮಾಗೆ ದೇಶಾದ್ಯಂತ ಥಿಯೇಟರ್ ಗಳಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು..
ಈ ಸಿಸಿನಿಮಾದ ನಿರ್ದೇಶಕರಾದ ವಿವೇಕ್ ಅಗ್ನಿಹೋತ್ರಿ ಅವರು ಇದೀಗ ದೆಹಲಿ ಫೈಲ್ಸ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ..
ಇದನ್ನೂ ಓದಿ: https://cinibazaar.com/2022/10/06/madhuri-deekshit…-ಅಪಾರ್ಟ್-ಮೆಂಟ್-ಖ/