GodFather : ಬಾಕ್ಸ್ ಆಫೀಸ್ ನಲ್ಲಿ ‘ಗಾಡ್ ಫಾದರ್’ ಅಬ್ಬರ..!!
ಒಂದೆಡೆ ಬಾಲಿವುಡ್ ನ ಸಿನಿಮಾ ಹೃತಿಕ್ ರೋಷನ್ ಸೈಫ್ ಅಲಿಖಾನ್ ನಟನೆಯ ತಮಿಳಿನ ರೀಮೇಕ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ನೆಲೆ ಕಂಡುಕೊಳ್ಳಲು ಹೆಣಗಾಡ್ತಿದ್ರೆ ಇತ್ತ ಮೆಗಾ ಸ್ಟಾರ್ ಚಿರಂಜೀವಿ ನಟಿಸಿರುವ ಮಲಯಾಳಂನ ಲೂಸಿಫರ್ ರೀಮೇಕ್ ಗಾಡ್ ಫಾದರ್ ಅಬ್ಬರಿಸುತ್ತಿದೆ.. ರಿಲೀಸ್ ಆದ 4 ದಿನಗಳಿಗೆ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ಕ್ಲಬ್ ಸೇರಿದೆ.. ಆಚಾರ್ಯ ಸಿನಿಮಾದ ಹೀನಾಯ ಸೋಲಿನ ನಂತರ ಗಾಡ್ ಫಾದರ್ ಮೂಲಕ ಚಿರು ಮೆತ್ತೆ ಗೆಲುವಿನ ನಗೆ ಬೀರಿದ್ದಾರೆ..
ಸಿನಿಮಾದಲ್ಲಿ ಸಲ್ಮಾನ್ ಖಾನ್ ಅತಿಥಿ ಪಾತ್ರ ಹೈಲೇಟ್ ಆಗಿದೆ.. ಮೊದಲ 2 ದಿನಗಳಲ್ಲೇ ಬಾಕ್ಸ್ ಆಫೀಸ್ ನಲ್ಲಿ ಸಿನಿಮಾ ವಿಶ್ವಾಧ್ಯಂತ 60 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ… ಅಕ್ಟೋಬರ್ 5 ರಂದು ವಿಜಯದಶಮಿಗೆ ರಿಲೀಸ್ ಆದ ಸಿನಿಮಾ ನಾಲ್ಕು ದಿನಗಳಲ್ಲಿ 100 ಕೋಟಿ ಕಲೆಕ್ಷನ್ ಮಾಡಿದೆ..