ಮದುವೆಯಾದ ನಾಲ್ಕು ತಿಂಗಳ ಬಳಿಕ ಲೇಡಿ ಸೂಪರ್ ಸ್ಟಾರ್ ನಯನತಾರಾ ಅವಳಿ ಮಕ್ಕಳ ತಾಯಿಯಾಗುಗವ ಮೂಲಕ ಅಭಿಮಾನಿಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಆದರೆ ಇದಕ್ಕಾಗಿ ನಯಾನ ಬಾಡಿಗೆ ತಾಯ್ತನದ ಮೊರೆ ಹೋಗಿದ್ದಾರೆ.
ಮದುವೆಗು ಮುಂಚೆಯೇ ಗರ್ಭ ಧರಿಸಿ ಮದುವೆಯಾದ ನಂತರವೇ ತಾಯಿಯಾಗುವ ಟ್ರೆಂಡ್ ಚಿತ್ರರಂಗದಲ್ಲಿ ಇದೀಗ ಚಾಲ್ತಿಯಲ್ಲಿದೆ. ನಯನತಾರ ಹೊರತುಪಡಿಸಿ ಹಲವು ನಟಿ ಮಣಿಯರು ಮದುವೆಗೂ ಮುಂಚೆಯೇ ಗರ್ಭ ಧರಿಸಿ, ಮಗು ಹುಟ್ಟುವ ಕೆಲವೇ ತಿಂಗಳುಗಳ ಮುಂಚೆ ಮದುವೆಯಾಗಿರುವ ಘಟನೆ ಚಿತ್ರರಂಗದಲ್ಲಿ ನಡೆದಿದೆ.
ನೇಹಾ ಧೂಪಿಯಾ
ಖ್ಯಾತ ಬಾಲಿವುಡ್ ನಟಿ ನೇಹಾ ಧೂಪಿಯಾ ಮೇ 2018 ರಲ್ಲಿ ಗೆಳೆಯ ಅಂಗದ್ ಬೇಡಿ ಅವರನ್ನು ವಿವಾಹವಾದರು. ನೇಹಾ ಈ ವರ್ಷದ ನವೆಂಬರ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ‘ನೋ ಫಿಲ್ಟರ್ ನೇಹಾ’ ಎಂಬ ಫೇಮಸ್ ಶೋನಲ್ಲಿ ನೇಹಾ ತಾನು ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದೆ ಎಂಬುದನ್ನ ಹೇಳಿಕೊಂಡಿದ್ದರು.
ದಿಯಾ ಮಿರ್ಜಾ
2018ರಲ್ಲಿ ಉದ್ಯಮಿ ವೈಭವ್ ರೇಖಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖ್ಯಾತ ನಟಿ ದಿಯಾ ಮಿರ್ಜಾ ಮದುವೆಯಾದ 4 ತಿಂಗಳ ನಂತರ ತಾಯಿಯಾದ ಬಗ್ಗೆ ಸಾಕಷ್ಟು ಚರ್ಚೆಗೆ ಒಳಗಾಗಿದ್ದರು. ಇದು ದಿಯಾ ಮತ್ತು ವೈಭವ್ ಅವರ ಎರಡನೇ ಮದುವೆಯಾಗಿತ್ತು. ಮದುವೆಯಾದ ನಾಲ್ಕು ತಿಂಗಳ ನಂತರ, ಇಬ್ಬರೂ ತಮ್ಮ ಮೊದಲ ಮಗುವನ್ನ ಸ್ವೀಕರಿಸಿದ್ದರು.
ಶ್ರೀದೇವಿ
ಮದುವೆಯಾದ ತಕ್ಷಣ ನಟಿ ತಾಯಿಯಾಗುವ ಸುದ್ದಿ ಈ ಕಾಲದಲ್ಲಷ್ಟೇ ಅಲ್ಲ, 80ರ ದಶಕದಲ್ಲೂ ಇಂಥದ್ದೇ ಸುದ್ದಿಯೊಂದು ಇಂಡಸ್ಟ್ರಿಯನ್ನು ಬೆಚ್ಚಿ ಬೀಳಿಸಿತ್ತು. ನಟಿ ಶ್ರೀದೇವಿ ಬೋನಿ ಕಪೂರ್ ಅವರನ್ನು ವಿವಾಹವಾದಾಗ ಅವರು ಏಳು ತಿಂಗಳ ಗರ್ಭಿಣಿಯಾಗಿದ್ದರು. ಈ ವಿಷಯವನ್ನು ಸ್ವತಃ ನಟಿಯೇ ಸಂದರ್ಶನವೊಂದರಲ್ಲಿ ಒಪ್ಪಿಕೊಂಡಿದ್ದಾರೆ.
ನತಾಶಾ ಸ್ಟಾಂಕೋವಿಕ್
ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮಾಡೆಲ್ ಮತ್ತು ನಟಿ ನತಾಶಾ ಸ್ಟಾಂಕೋವಿಕ್ ಅವರ ಮದುವೆಯಾದ ಕೆಲವೇ ದಿನಗಳಲ್ಲಿ ತಾಯಿಯಾಗುತ್ತಾರೆ ಎಂಬ ಸುದ್ದಿ ಸುದ್ದಿಯಾಗಿತ್ತು. ವರದಿಗಳ ಪ್ರಕಾರ, ನತಾಶಾ ಹಾರ್ದಿಕ್ ಜೊತೆಗಿನ ಮದುವೆಗೆ ಮುಂಚೆಯೇ ತಮ್ಮ ಮಗುವಿಗೆ ತಾಯಿಯಾಗಿದ್ದರು. ಇಬ್ಬರಿಗೂ ಗರ್ಭಧಾರಣೆಯ ವಿಷಯ ತಿಳಿದಾಗ, ದಂಪತಿಗಳು ತರಾತುರಿಯಲ್ಲಿ ಮದುವೆಯಾಗಲು ನಿರ್ಧರಿಸಿದರು.
ಕೊಂಕಣ ಸೇನ್
ಮದುವೆಗೂ ಮುನ್ನ ಗರ್ಭಿಣಿಯಾಗಿದ್ದ ನಟಿಮಣಿಯರ ಹೆಸರಿನಲ್ಲಿ ಕೊಂಕಣಾ ಸೇನ್ ಕೂಡ ಸೇರಿದ್ದಾರೆ. ಕೊಂಕಣ ಸೇನ್ ಸೆಪ್ಟೆಂಬರ್ 2010 ರಲ್ಲಿ ನಟ ಗೆಳೆಯ ರಣವೀರ್ ಶೋರೆ ಅವರನ್ನು ವಿವಾಹವಾದರು. ಮದುವೆಯಾದ 6 ತಿಂಗಳ ನಂತರ, ಕೊಂಕಣ ಮಾರ್ಚ್ 2011 ರಲ್ಲಿ ಮಗನಿಗೆ ಜನ್ಮ ನೀಡಿದ್ದರು. ಈ ಮದುವೆ ಹೆಚ್ಚು ಕಾಲ ಉಳಿಯದಿದ್ದರೂ, 2020 ರಲ್ಲಿ ಇಬ್ಬರೂ ವಿಚ್ಛೇದನ ಪಡೆದುಕೊಂಡರು.
ಸೆಲಿನಾ ಜೇಟ್ಲಿ
ಬಾಲಿವುಡ್ ನಟಿ ಸೆಲಿನಾ ಜೇಟ್ಲಿ 2012 ರಲ್ಲಿ ದುಬೈ ಉದ್ಯಮಿಯನ್ನು ವಿವಾಹವಾಗಿದ್ದರು, ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಸೆಲಿನಾ ಅವಳಿ ಮಕ್ಕಳಿಗೆ ಜನ್ಮ ನೀಡಿದಳು. ಮದುವೆಯ ನಂತರ, 9 ತಿಂಗಳಿಗಿಂತ ಮುಂಚೆಯೇ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು.
ಅಮೃತಾ ಅರೋರಾ
ಬಾಲಿವುಡ್ ಇಂಡಸ್ಟ್ರಿಯಿಂದ ಬ್ರೇಕ್ ತೆಗೆದುಕೊಂಡಿದ್ದ ನಟಿ ಅಮೃತಾ ಅರೋರಾ ಮದುವೆಗೆ ಮುಂಚೆಯೇ ಗರ್ಭ ಧರಿಸಿದ್ದರು ಎಂದು ಸುದ್ದಿಯಾಯಿತು. ಈ ಕಾರಣದಿಂದಾಗಿ, ನಟಿ ಅಮೃತ ಉದ್ಯಮಿ ಶಕೀಲ್ ಲಡಾಕ್ ಅವರನ್ನು ತರಾತುರಿಯಲ್ಲಿ ಮದುವೆಯಾಗಿದ್ದರು.
ಮಹಿಮಾ ಚೌಧರಿ
ಬಾಲಿವುಡ್ ನಟಿ ಮಹಿಮಾ ಚೌಧರಿ 2006 ರಲ್ಲಿ ಬಾಬಿ ಮುಖರ್ಜಿ ಅವರನ್ನು ಡಿಢೀರ್ ಮದುವೆಯಾಗುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು. ಅವರ ದಿಡೀರ್ ಮದುವೆ ನಿರ್ಧಾರಕ್ಕೆ ಆಕೆಯ ಗರ್ಭಧಾರಣೆಯೇ ಕಾರಣ ಎನ್ನಲಾಗಿದೆ. ಮದುವೆಯಾದ ಕೆಲವೇ ತಿಂಗಳ ನಂತರ ಮಗಳಿಗೆ ಜನ್ಮ ನೀಡಿದ್ದರು.