Ramya : ರಾಜ್ ಬಿ ಶೆಟ್ಟಿ ಸಿನಿಮಾದ ಶೂಟಿಂಗ್ ನಲ್ಲಿ ರಮ್ಯಾ..??
ಮೋಹಕತಾರೆ ರಮ್ಯಾ ಸದ್ಯ ಬಹಳ ವರ್ಷಗಳ ನಂತರ ಮತ್ತೆ ಬಣ್ಣ ಹಚ್ಚಲಿದ್ದಾರೆ.. ರಾಜ್ ಬಿ ಶೆಟ್ಟಿ ನಿರ್ದೇಶನ ‘ ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ಮೂಲಕ ಮತ್ತೆ ಸ್ಯಾಂಡಲ್ ವುಡ್ ಕ್ವೀನ್ ಕಮ್ ಬ್ಯಾಕ್ ಮಾಡ್ತಿದ್ದು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ..
ಸೋಷಿಯಲ್ ಮೀಡಿಯಾದಲ್ಲಿ ರಮ್ಯಾ ಆಕ್ಟೀವ್ ಆಗಿರುತ್ತಾರೆ.. ಇತ್ತೀಚೆಗೆ ರಮ್ಯಾ ಇನ್ಸ್ಟಾಗ್ರಾಂನಲ್ಲಿ ಫೋಟೋ ಒಂದನ್ನ ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ಗಮನ ಸೆಳೆಯುತ್ತಿದೆ.. ಸುಂದರ ರಮಣೀಯ ತಾಣದಲ್ಲಿನ ಚಿತ್ರವನ್ನ ರಮ್ಯಾ ಹಂಚಿಕೊಂಡಿದ್ದಾರೆ..
ಈ ಫೋಟೋ ಸಾಕಷ್ಟು ಕ್ಯೂರಿಯಾಸಿಟಿಗೆ ಕಾರಣವಾಗಿದೆ.. ಅಷ್ಟೇ ಅಲ್ಲ ಅವರ ಕ್ಯಾಪ್ಷನ್ ಸಖತ್ ಗಮನ ಸೆಳೆಯುತ್ತಿದೆ.. ರಾಜ್.ಬಿ ಶೆಟ್ಟಿಯವರು ಹತ್ತಿರವಿದ್ದಲ್ಲಿ ಬೇಸರಕ್ಕೆ ಜಾಗವಿಲ್ಲ ಎಂದು ಬರೆದುಕೊಂಡಿದ್ದಾರೆ.. ಹೀಗಾಗಿಯೇ ರಮ್ಯಾ ಅದಾಗಲೇ ಸದ್ದಿಲ್ಲದೇ ರಾಜ್ ಬಿ ಶೆಟ್ಟಿ ಅವರ ಡೈರೆಕ್ಷನ್ ನ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರಾ ಎಂಬೆಲ್ಲಾ ಪ್ರಶ್ನೆಗಳು ಕಾಡ್ತಿದೆ..
ಅಂದ್ಹಾಗೆ ರಮ್ಯಾರ ಹೊಸ ಪ್ರೊಡಕ್ಷನ್ ಸಂಸ್ಥೆ ಆಪಲ್ ಬಾಕ್ಸ್ ಮತ್ತು ರಾಜ್ ಬಿ ಶೆಟ್ಟಿ ಅವರ ಲಾಫಿಂಗ್ ಬುದ್ಧ ನಿರ್ಮಾಣ ಸಂಸ್ಥೆಯಡಿಯಲ್ಲಿ ಈ ಚಿತ್ರ ತಯಾರಾಗುತ್ತಿದೆ. ಈ ಸಿನಿಮಾದ ಕಥೆ ಬಹಳ ವಿಭಿನ್ನವಾಗಿರಲಿದೆ..
ಗರುಡಗಮನ ವೃಷಭ ವಾಹನ ಸಿನಿಮಾದ ನಂತರ ರಾಜ್ ಬಿ ಶೆಟ್ಟಿ ಅವರ ನಿರ್ದೇಶನದ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಹೆಚ್ಚಾಗಿರೋದು ಒಂದೆಡೆಯಾದ್ರೆ ವರ್ಷಗಳ ನಂತರ ರಮ್ಯಾ ಕಮ್ ಬ್ಯಾಕ್ ಮಾಡುತ್ತಿರುವ ಅಂಶಗಳು ಈ ಸಿನಿಮಾ ಮೇಲೆ ಒಲವು ಹೆಚ್ಚಾಗುವಂತೆ ಮಾಡಿದೆ..