ಬಿಗ್ ಬಾಸ್ ಕನ್ನಡ 9 – ಮೂರನೇ ವಾರ ಮನೆಯಿಂದ ದರ್ಶ್ ಚಂದ್ರಪ್ಪ ಹೊರ ನಡೆದಿದ್ದಾರೆ..
ಬಿಗ್ ಬಾಸ್ ಕನ್ನಡ ಸೀಸನ್ 9 ಮತ್ತೊಂದು ಹೊಸ ವಾರಕ್ಕೆ ಸಜ್ಜಾಗಿದೆ.
ಸೂಪರ್ ಸಂಡೆ ವಿತ್ ಸುದೀಪ್ ಸಂಚಿಕೆಯಲ್ಲಿ, ಟಿವಿ ರಿಯಾಲಿಟಿ ಶೋ ಬಗ್ಗೆ ವಿವಾದಾತ್ಮಕ ಕಾಮೆಂಟ್ಗಳನ್ನು ಮಾಡಿದ್ದಕ್ಕಾಗಿ ಬಿಬಿಕೆ 9 ನಿರೂಪಕ ಕಿಚ್ಚ ಸುದೀಪ್ ಆರ್ಯವರ್ಧನ್ ಗುರೂಜಿ ವಿರುದ್ಧ ವಾಗ್ದಾಳಿ ನಡೆಸಿದರು.
ನಿನ್ನೆಯ ವಾರಾಂತ್ಯದ ಸಂಚಿಕೆಯಲ್ಲಿ ಆರ್ಯವರ್ಧನ್ ಮತ್ತು ಕಿಚ್ಚ ಸುದೀಪ್ ನಡುವೆ ಮಾತಿನ ಚಕಮಕಿ ನಡೆದಿತ್ತು..
ಆ ನಂತರ ದರ್ಶ್ ಚಂದ್ರಪ್ಪ ಅವರನ್ನು ಎಲಿಮಿನೇಟ್ ಎಂದು ಘೋಷಿಸಿದರು.. ದರ್ಶ್ ಚಂದ್ರಪ್ಪ ಉತ್ತಮವಾಗಿ ಆಡಿದರು, ಆದರೆ ಅವರು ಪ್ರೇಕ್ಷಕರ ನಿರೀಕ್ಷೆಯನ್ನು ತಲುಪಲು ವಿಫಲರಾಗಿರಬಹುದು..
ಮೂಲಗಳ ಪ್ರಕಾರ ವಾರಕ್ಕೆ ದರ್ಶ್ ಚಂದ್ರಪ್ಪಗೆ ಸುಮಾರು 2.5 ಲಕ್ಷ ರೂ. ಸಿಕ್ಕಿದೆ ಎಂದು ಹೇಳಲಾಗಿದೆ.. ದರ್ಶ್ ಚಂದ್ರಪ್ಪ ಗಳಿಸಿದ ಒಟ್ಟು ಹಣ ಸುಮಾರು 7.5 ಲಕ್ಷ ಎಂದು ಅಂದಾಜಿಸಲಾಗಿದೆ. ದರ್ಶ್ ಚಂದ್ರಪ್ಪ ಒಬ್ಬ ನಟ ಮತ್ತು ಬ್ಯುಸಿನೆಸ್ ಮೆನ್ ಕೂಡ ಆಗಿದ್ದಾರೆ..