Puneeth Parva : ‘ಗಂಧದ ಗುಡಿ’ ಪ್ರೀ ರಿಲೀಸ್ ಈವೆಂಟ್ ನಲ್ಲಿ ಅಪ್ಪು ಅಭಿಮಾನಿ ಹೃದಯಾಘಾತದಿಂದ ಸಾವು..
ಗಂಧದ ಗುಡಿ ಸಾಕ್ಷ್ಯ ಚಿತ್ರ ಪ್ರೀ ರಿಲೀಸ್ ಈವೆಂಟ್ ‘ಪುನೀತ ಪರ್ವ’ ನಿನ್ನೆ ( ಅಕ್ಬೋಬರ್ 21) ಅದ್ಧೂರಿಯಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಿತು.. ವಿಪರ್ಯಾಸವೆಂದ್ರೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಪ್ಪು ಅಭಿಯಾನಿಯೊಬ್ಬರು ಹೃದಯಾಘಾತದಿಂದ ಸಾವನಪ್ಪಿದ್ದಾರೆ..
ಮಲ್ಲೇಶ್ವರಂನ ಲಿಂಕ್ ರೋಡ್ ನಲ್ಲಿ ಇರುವ ಪುನೀತ್ ಅಭಿಮಾನಿಯನ್ನು ಹೃದಯಾಘಾತವಾದ ತಕ್ಷಣವೇ ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೋಯಲಾಗಿತ್ತು. ಆದರೆ ಅಷ್ಟರಲ್ಲಿ ಅಭಿಮಾನಿ ಸಾವನ್ನಪ್ಪಿದ್ದರು. ಮೃತ ಅಭಿಮಾನಿಯನ್ನ ಗಿರಿರಾಜ್ ಎಂದು ಗುರುತಿಸಲಾಗಿದೆ.. ಪುನೀತ್ ಪರ್ವ ಕಾರ್ಯಕ್ರಮ ನೋಡುವಾಗ ಈ ಅಭಿಮಾನಿ ಭಾವುಕಾರಗಿ ಕಣ್ಣೀರಿಟ್ಟಿದ್ದರು.