kangana : ಸದಾ ಸುದ್ದಿಯಲ್ಲೇ ಇರುವ , ವಿವಾದಗಳನ್ನ ಮಾಡಿಕೊಳ್ತಾ ಬಾಲಿವುಡ್ ಮಂದಿ ವಿರುದ್ಧವೇ ಮಾತನಾಡುತ್ತಾ , ರಾಜಕೀಯವಾಗಿಯೂ ಚರ್ಚೆಯಾಗುತ್ತಾ ಇರುವ ನಟಿ ಅಂದ್ರೆ ಅದು ಕಂಗನಾ ರಣೌತ್.. ಅದ್ರಲ್ಲೂ ಸದಾ ಬಿಜೆಪಿ , ಪ್ರಧಾನಿ ಮೋದಿ ಪರ ಮಾತನಾಡುವ ಕಂಗನಾ ಬಿಜೆಪಿ ಸೇರಲಿದ್ದಾರೆ , ಚುನಾವಣೆಯಲ್ಲೂ ಸ್ಪರ್ಧಿಸಲಿದ್ದಾರೆ ಎಂಬ ವದಂತಿಗಳಿದ್ದು , ಇದೀಗ ನಟಿ ಈ ಬಗ್ಗೆ ಮಾತನಾಡಿದ್ದು , ರಾಜಕೀಯದ ಭಾಗವಾಗಲು ಬಯಸಿದರೆ ನಾನು ಸಿದ್ಧ ಎಂದಿದ್ದಾರೆ..
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ನಡ್ಡಾ ಅವರು ಕಂಗನಾ ಬಿಜೆಪಿ ಸೇರ್ಪಡೆ ಸ್ವಾಗತಾರ್ಹ ಆದ್ರೆ ಚುನಾವಣೆಗೆ ಸ್ಪರ್ಧಿಸುವುದು ಅದು ಪಕ್ಷದ ನಿರ್ಧಾರ ಎಂದಿದ್ದಾರೆ..
ಇತ್ತೀಚೆಗೆ ಕಂಗನಾ ಈ ಬಗ್ಗೆ ಸುಳಿವು ನೀಡಿದ್ದರು.. ಪರಿಸ್ಥಿತಿ ಏನೇ ಇರಲಿ, ಸರ್ಕಾರ ನನ್ನ ಭಾಗವಹಿಸುವಿಕೆ ಬಯಸಿದ್ರೆ ನಾನು ರಾಜಕೀಯಕ್ಕೆ ಬರುತ್ತೇನೆ. ಹಿಮಾಚಲ ಪ್ರದೇಶದ ಜನರು ತಮ್ಮ ಸೇವೆ ಮಾಡಲು ನನಗೆ ಅವಕಾಶ ನೀಡಿದರೆ, ಅದು ನನ್ನ ಸೌಭಾಗ್ಯ. ನನ್ನ ಅದೃಷ್ಟ ಅಂದುಕೊಳ್ಳುತ್ತೇನೆ ಎಂದು ಹೇಳಿದ್ದರು.
ಇದಕ್ಕೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿರುವ ಜೆ.ಪಿ ನಡ್ಡಾ ಅವರು ಕಂಗನಾ ರಣಾವತ್ ಪಕ್ಷಕ್ಕೆ ಸೇರಲು ಸ್ವಾಗತಾರ್ಹ. ಪಕ್ಷದೊಂದಿಗೆ ಕೆಲಸ ಮಾಡಲು ಬಯಸುವವರಿಗೆ ಸಾಕಷ್ಟು ಸ್ಥಳವಿದೆ. ಆದರೆ ಚುನಾವಣೆಯಲ್ಲಿ ಸ್ಪರ್ಧಿಸುವುದು ನನ್ನ ನಿರ್ಧಾರವಲ್ಲ, ತಳಮಟ್ಟದಿಂದ ಸಮಾಲೋಚನೆ ಪ್ರಕ್ರಿಯೆ ಇದೆ. ಚುನಾವಣಾ ಸಮಿತಿಯಿಂದ ಸಂಸದೀಯ ಮಂಡಳಿ ವರೆಗೆ ಸಮಾಲೋಚನೆ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.