ಕೇರಳದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ತೆಲುಗು ನಟ ಅಲ್ಲು ಅರ್ಜುನ್ ಅವರ ಪತ್ನಿ ಸ್ನೇಹ ರೆಡ್ಡಿ ಅವರು ಇದೀಗ ಮಾಲಿವುಡ್ ಸಿನಿಮಾದಲ್ಲಿ ನಟಿಸುವ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗ್ತಿದ್ದಾರೆಂಬ ಸುದ್ದಿ ಹರಿದಾಡ್ತಿದೆ..
ವರದಿಯ ಪ್ರಕಾರ, ಸೋಷಿಯಲ್ ಮೀಡಿಯಾದಲ್ಲಿ ಬಹಳ ಜನಪ್ರಿಯವಾಗಿರುವ ಸ್ನೇಹಾ ಮಾಲಿವುಡ್ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಲಿದ್ದಾರೆ. ಅಧಿಕೃತ ದೃಢೀಕರಣವನ್ನು ಇನ್ನೂ ಮಾಡಬೇಕಾಗಿದ್ದರೂ ಸಹ, ಸ್ನೇಹಾ ತನ್ನ ಚೊಚ್ಚಲ ಚಿತ್ರದಲ್ಲಿ ಮಾಲಿವುಡ್ ನ ಟಾಪ್ ಸ್ಟಾರ್ ಜೊತೆಗೆ ನಟಿಸಲಿದ್ದಾರೆ ಎಂದು ವರದಿ ಹೇಳುತ್ತದೆ.