Anushka Shetty : 41 ನೇ ವಸಂತಕ್ಕೆ ಕಾಲಿಟ್ಟ ಸ್ವೀಟಿ..!!
ಸೌತ್ ಇಂಡಿಯಾದ ಲೇಡಿ ಸೂಪರ್ ಸ್ಟಾರ್ ಅಂತ ಸ್ವೀಟಿಯನ್ನ ಕರೆದ್ರೆ ತಪ್ಪಾಗಲಾರದು.. ಮಹಿಳಾ ಪ್ರಧಾನ ಸಿನಿಮಾಗಳೇ ಇರಲಿ , ಗ್ಲಾಮ್ , ಡಿ ಗ್ಲಾಮ್ ಇರಲಿ , ಟ್ರೆಡಿಷನಲ್ ಇರಲಿ , ಮಾಡರ್ನ್ ಇರಲಿ ಎಂತಹ ಸಿನಿಮಾ , ಎಂತಪಹದ್ದೇ ಪಾತ್ರ ಇರಲಿ ಸ್ವೀಟಿ ಆ ಪಾತ್ರಗಳಿಗೆ ತಮ್ಮನ್ನ ತಾವು ಹೊಂದಿಸಿಕೊಳ್ಳುವ ನಟಿ..
ಮೂಲತಃ ಕರಾವಳಿಯ ಕನ್ನಡತಿ ಅನುಷ್ಕಾ ಶೆಟ್ಟಿಗೆ ಇಂದು 41 ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ..
ಅನುಷ್ಕಾ ಶೆಟ್ಟಿ ತೆಲುಗು ಚಿತ್ರರಂಗದ ದೊಡ್ಡ ಸ್ಟಾರ್ ನಟಿಯರ ಪೈಕಿ ಒಬ್ರು.. ಆಕೆಯ ಶಕ್ತಿಯುತ ಅಭಿನಯ ಮತ್ತು ಪ್ರಭಾವಶಾಲಿ ಪಾತ್ರಗಳ ಆಯ್ಕೆಯಿಂದಾಗಿ ಅವರು ಬಹಳಷ್ಟು ಜನರ ಅಚ್ಚುಮೆಚ್ಚಾಗಿದ್ದಾರೆ..
ಟಾಲಿವುಡ್ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಟ್ವಿಟರ್‌ನಲ್ಲಿ ಸ್ವೀಟಿಗೆ 41 ನೇ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.