BBK 9 : ನನ್ನ ಹೃದಯದಲ್ಲಿ ನೀನು ಯಾವಾಗಲೂ ಇರುತ್ತೀಯಾ..!! ಸಾನ್ಯಾಗೆ ರೂಪೇಶ್ ಭಾವುಕ ಮಾತು
ಬಿಗ್ ಬಾಸ್ ಒಟಿಟಿಯಲ್ಲಿ ಸಖತ್ ಹೈಲೇಟ್ ಆಗಿ ನಂತರ ಟಿವಿ ಬಿಗ್ ಬಾಸ್ ಗೂ ಪ್ರವೇಶ ಪಡೆದಿದ್ದ ಪುಟ್ಟ ಗೌರಿ ಮದುವೆ ಖ್ಯಾತಿಯ ನಟಿ ಸಾನ್ಯಾ ಐಯರ್ ಸಖತ್ ಶೈನ್ ಆಗಿದ್ದರು.. ಒಮ್ಮೆ ಮನೆಯ ಕ್ಯಾಪ್ಟನ್ ಕೂಡ ಆಗಿದ್ದವರು.. ರೂಪೇಶ್ ಶೆಟ್ಟಿ ಜೊತೆಗೆ ಒಟಿಟಿಯಿಂದಲೂ ತುಂಬಾ ಆತ್ಮೀಯವಾಗಿ ಕಾಣಿಸಿಕೊಂಡಿದ್ದರು.. ಇಬ್ಬರ ನಡುವೆ ಲವ್ ಗಾಸಿಪ್ ಇತ್ತು.. ಆದ್ರೆ ಅದ್ಯಾವಾಗ ಕಿಚ್ಚ ಸುದೀಪ್ ಅವರು ಲಿಮಿಟ್ ಕ್ರಾಸ್ ಮಾಡಬೇಡಿ ಎಂದು ವಾರ್ನಿಂಗ್ ಕೊಟ್ರೋ ಅಲ್ಲಿಂದ ರೂಪೇಶ್ ಸಾನ್ಯಾರನ್ನ ಕೊಂಚ ಅವಾಯ್ಡ್ ಮಾಡುತ್ತಾ ಬಂದಿದ್ದರು.. ಇತ್ತೀಚೆಗಂತೂ ಇವರಿಬ್ಬರ ನಡುವೆ ಕಿರಿಕ್ ನಡೆಯುತ್ತಲೇ ಇತ್ತು.. ಇದೀಗ ದೊಡ್ಮನೆಯಲ್ಲಿ ಪುಟ್ಟಗೌರಿಯ ಗೇಮ್ ಓವರ್ ಆಗಿದೆ..
ಸಾನ್ಯಾ ಎಲಿಮಿನೇಷನ್ ನಿಂದ ಅಭಿಮಾನಿಗಳು ಶಾಕ್ ಆಗಿದ್ದಾರೆ..
ಸಾನ್ಯಾ ಎಲಿಮಿನೇಷನ್ ನಿಂದ ರೂಪೇಶ್ ಶೆಟ್ಟಿ ಬಹಳ ನೊಂದಿದ್ದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.. ಸಾನ್ಯಾ ಮಡಿಲಲ್ಲಿ ತಲೆಯಿಟ್ಟು ಅತ್ತಿದ್ದಾರೆ.. ಸಾನ್ಯಾ ಹೊರ ನಡೆದಿದ್ದನ್ನ ಸಹಿಸೋಕಾಗದೇ ದುಃಖಿಸಿದ್ದಾರೆ..
ನಿನ್ನ ನಾನು ತುಂಬ ಮಿಸ್ ಮಾಡಿಕೊಳ್ತೀನಿ. ನನ್ನೊಳಗಿನ ಫೀಲ್ ಬದಲಾಗಿದೆ. ಯಾವತ್ತೂ ಯಾವ ಹುಡುಗಿಗೂ ಇಷ್ಟೊಂದು ಸ್ಲೇಸ್ ಕೊಡುತ್ತೀನಿ ಎಂದುಕೊಂಡಿರಲಿಲ್ಲ. ನನಗೆ ನನ್ನ ಫ್ಯಾಮಿಲಿ ಬಗ್ಗೆ ಪ್ರೀತಿ ಬರುವಂತೆ ಮಾಡಿದ್ದೀಯಾ. ನನ್ನಲ್ಲಿ ಇಷ್ಟೊಂದು ಮೌಲ್ಯ ಬರುವಂತೆ ಮಾಡಿದ್ದಿಯಾ. ನಾನು ಜೀವನವನ್ನು ನೋಡುವ ವಿಧಾನ ಬದಲಾಗಿದೆ.
ಸ್ಪರ್ಧಿಯಾಗಿ ನೀನು ಇಲ್ಲಿ ಸೋತಿರುವೆ, ಆದರೆ ಮನುಷ್ಯಳಾಗಿ ನೀನು ಗೆದ್ದಿದ್ದೀಯಾ. ನೀನು ಮನೆಯಿಂದ ಹೊರಗಡೆ ಹೋದ ಮೇಲೆ ದಯವಿಟ್ಟು ಬದಲಾಗಬೇಡ, ನೀನು ಬದಲಾದರೆ ನಾನು ಬದಲಾಗಿರೋದಿಕ್ಕೆ ಮೌಲ್ಯವೇ ಇರೋದಿಲ್ಲ. ನೀನು ಬಿಗ್ ಬಾಸ್ ಮನೆಯಲ್ಲಿ ತುಂಬ ಮುಖ್ಯ ಆಗಿದ್ದೆ, ನನ್ನ ಜೀವನದಲ್ಲಿ ಕೂಡ ಮುಖ್ಯ ಇರುತ್ತೀಯಾ. ನನ್ನ ಹೃದಯದಲ್ಲಿ ನೀನು ಯಾವಾಗಲೂ ಇರುತ್ತೀಯಾ. ಇದುವರೆಗೂ ನಾನು ಎರಡು ಬಾರಿ ಕಣ್ಣೀರು ಹಾಕಿದ್ದೀನಿ, ಅದು ನಿನ್ನ ವಿಚಾರಕ್ಕೆ ಎಂದು ಹೇಳುತ್ತಾ ರೂಪೇಶ್ ಶೆಟ್ಟಿ ಅತ್ತಿದ್ದಾರೆ..
ನಾನು ನಿನಗೆ ಸಮಯ ಕೊಡಬೇಕಿತ್ತು. ಆಗಲಿಲ್ಲ, ನಿನಗೆ ನಾನು ಬೇಜಾರು ಮಾಡಿದ್ದರೆ ದಯವಿಟ್ಟು ಕ್ಷಮಿಸು. ಪ್ರತಿ ವಾರ ರೆಡ್ ಟೀ ಶರ್ಟ್ ಕಳಿಸು, ಅದರಲ್ಲಿ ಯೆಸ್ ಅಂತ ಇರಲಿ. ನಾನು ಯಾವತ್ತೂ ಅಳೋದಿಲ್ಲ. ಆದರೆ ನಿನಗೋಸ್ಕರ ಎರಡು ಬಾರಿ ಅತ್ತಿದ್ದೇನೆ. ಇದು ಯಾರಿಗೂ ಅರ್ಥವಾಗದೆ ಇರಬಹುದು, ಆದರೆ ನಿನಗೆ ಅರ್ಥವಾಗತ್ತೆ. ಇದು ನನ್ನ ಜೆನ್ಯೂನ್ ಫೀಲಿಂಗ್ ಎಂದು ರೂಪೇಶ್ ಶೆಟ್ಟಿ ಕಣ್ಣೀರು ಹಾಕಿದ್ದಾರೆ.