Kantara : ಹಿಂದಿ ಬಾಕ್ಸ್ ಆಫೀಸ್ ನಲ್ಲಿ ಕಾಂತಾರ ಹವಾ..!! 62 ಕೋಟಿ ಕಲೆಕ್ಷನ್
ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರ ಕರ್ನಾಟಕ ಬಾಕ್ಸ್ ಆಫೀಸ್ ನಲ್ಲಿ ಸುನಾಮಿ ಸೃಷ್ಟಿಸಿದೆ. ಮಾತ್ರವಲ್ಲದೇ ವಿಶ್ವಾದ್ಯಂತ ಸೌಂಡ್ ಮಾಡ್ತಿದೆ,.. ಪರ ಭಾಷೆಗಳ ಬಾಕ್ಸ್ ಆಫೀಸ್ ನಲ್ಲಿ ಕಾಂತಾರ ಹವಾ ಜೋರಾಗಿದೆ.. ರಿಲೀಸ್ ಆಗಿ ತಿಂಗಳೇ ಕಳೆದ್ರೂ ಸಿನಿಮಾದ ಆರ್ಭಟ ಮಾತ್ರ ಒಂಚೂರೂ ಕಡಿಮೆಯಾಗಿಲ್ಲ..
ರಜನಿಕಾಂತ್ , ಪ್ರಭಾಸ್ , ಕಿಚ್ಚ ಸುದೀಪ್ , ಕಂಗನಾ , ಪೃಥ್ವಿ ಸುಕುಮಾರ್ , ವಿತ್ತ ಸಚಿವೆ ನಿರ್ಮಲಾ ಸೀತಾರಮ್ ಅವರಿಂದ ಹಿಡಿದು ಸಿನಿ ತಾರೆಯರು , ರಾಜಕಾರಣಿಗಳೆಲ್ಲರೂ ಸಿನಿಮಾವನ್ನ ಕೊಂಡಾಡುತ್ತಿದ್ದಾರೆ..
ಇದೀಗ ಹಿಂದಿ ಗಲ್ಲಾಪೆಟ್ಟಿಗೆಯಲ್ಲಿ 60 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.ಹಿಂದಿ ಗಲ್ಲಾಪೆಟ್ಟಿಗೆಯಲ್ಲಿ ಕಾಂತಾರ ನಾಲ್ಕನೇ ವಾರದಲ್ಲಿ 62.40 ಕೋಟಿ ರೂ. ಕಲೆಕ್ಷನ್ ಮಾಡಿದೆ.