Krishna – Milana : ಹೊಸ ಮನೆಯ ಗೃಹಪ್ರವೇಶ..!! ಮನೆಗೆ KrissMe Nest ಎಂದು ಹೆಸರು..!!
ಲವ್ ಮಾಕ್ಟೇಲ್ , ಲವ್ ಮಾಕ್ಟೇಲ್ 2 ಮೂಲಕ ಸಖತ್ ಮೋಡಿ ಮಾಡಿದ ಜೋಡಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ರಿಯಲ್ ಲೈಫ್ ನಲ್ಲಿ ಗಂಡ ಹೆಂಡತಿಯಾಗಿದ್ದು , ಅನೇಕ ಫ್ಯಾನ್ ಗಳನ್ನ ಹೊಂದಿದ್ದಾರೆ…
ಸ್ಯಾಂಡಲ್ ವುಡ್ ನ ೀ ಕ್ಯೂಟ್ ಜೋಡಿ ಆಗಾಗ ಪ್ರವಾಸಗಳನ್ನ ಹೋಗುತ್ತಾ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನೂ ಹಂಚಿಕೊಳ್ತಿರುತ್ತಾರೆ.. ಇಬ್ಬರೂ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ..
ಅಂದ್ಹಾಗೆ ಮಿಲನ ಹಾಗೂ ಡಾರ್ಲಿಂಗ್ ಕೃಷ್ಣ ಇದೀಗ ತಮ್ಮ ಹೊಸ ಮನೆಯ ಗೃಹ ಪ್ರವೇಶ ಮಾಡಿದ್ದು ಸಂಭ್ರಮದಿಂದ ತಮ್ಮ ಹೊಸ ಗೂಡು ಪ್ರವೇಶ ಮಾಡಿದ್ದಾರೆ..
ತಮ್ಮ ಹೊಸ ಮನೆಯ ಗೃಹಪ್ರವೇಶದ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು , ಅವರಿಗೆ ಅಭಿಮಾಣಿಗಳು ಶುಭ ಹಾರೈಸುತ್ತಿದ್ದಾರೆ.. ಇಬ್ಬರೂ ಕೂಡ ಟ್ರೆಡಿಷನಲ್ ಆಗಿ ಮಿಂಚಿದ್ದಾರೆ..
ಅಂದ್ಹಾಗೆ ಇವರ ಈ ಹೊಸ ಮನೆಗೆ KrissMe Nest ಎಂದು ಹೆಸರಿಡಲಾಗಿದೆ. ಅಂದ್ರೆ ಕೃಷ್ಣ ಮಿಲನ ಗೂಡು ಎಂದರ್ಥದಲ್ಲಿದೆ ಈ ಹೆಸರು,..
ಹೊಸ ಮನೆಯಲ್ಲಿ ಪೂಜೆ ಮಾಡಿಸಿ ಸಂಭ್ರಮ ಪಟ್ಟಿದ್ದಾರೆ.