Lohithashwa : ಕನ್ನಡದ ಖ್ಯಾತ ಹಿರಿಯ ನಟ ಲೋಹಿತಾಶ್ವ ನಿಧನ..!!
ಕನ್ನಡ ಸಿನಿಮಾರಂಗದ ಸ್ಟಾರ್ ನಟ ಲೋಹಿತಾಶ್ವ ಅವರು ನಿಧನರಾಗಿದ್ದಾರೆ.. ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೆ ಒಳಗಾಗಿದ್ದ ಲೋಹಿತಾಶ್ವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಇಂದು ಮಧ್ಯಾಹ್ನ ( ನವೆಂಬರ್ 9 ) ಕೊನೆಯುಸಿರೆಳೆದಿದ್ದಾರೆ..
ಲೋಹಿತಾಶ್ವ ಅವರ ಪುತ್ರ ಶರತ್ ಲೋಹಿತಾಶ್ವ ಅವರು ಕೂಡ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ನಟರಾಗಿ ಗುರುತಿಸಿಕೊಂಡಿದ್ದಾರೆ.. ಖಳನಾಯಕಾರಗಿ ಮಿಂಚಿದ್ದಾರೆ..
1981ರ ಮುನಿಯನ ಮಾದರಿ , ಸಾಂಗ್ಲಿಯಾನ , ಅಭಿಮನ್ಯು , ದಾದಾ , ಎ.ಕೆ 47 , ಗೀತಾ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದು , ಖಳನಾಯಕನಾಗಿ ಹೆಚ್ಚು ಮಿಂಚಿದ್ದರು..