Pooja Hegde : ಯಾರಾದ್ರೂ ಓಕೆ ಪೂಜಾ ಹೆಗ್ಡೆ ಜೊತೆ ಮಾತ್ರ ಕಿಸ್ ಬೇಡವೆಂದ ನಟ..!!
ಕೆಲ ದಿನಗಳ ಹಿಂದಷ್ಟೇ ನಟಿ ರೆಜಿನಾ ಕೆಸ್ಸಾಂಡ್ರಾ ಹುಡುಗರ ಸಾಮರ್ಥ್ಯದ ಬಗ್ಗೆ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದ್ದ ಸ್ಟಾರ್ ನಟ ಅಡವಿ ಸೇಶ್
ನನ್ನ ಸಾಮರ್ಥ್ಯ ಹೆಚ್ಚಿದೆ ಎಂದು ವೇದಿಕೆ ಮೇಲೆ ರೆಜಿನಾ ಮುಂದೆಯೇ ಟಾಂಗ್ ನೀಡಿದ್ದರು. ಈ ಮೂಲಕ ಈ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿತ್ತು..
ಇದೀಗ ಇತ್ತೀಚೆಗೆ ಬಾಲಕೃಷ್ಣ ಅವರು ನಡೆಸಿಕೊಡುತ್ತಿರುವ ಜನಪ್ರಿಯ ಟಾಕ್ ಶೋ ಅನ್ ಸ್ಟಾಪೆಬಲ್ 2 ರಲ್ಲಿ ಭಾಗವಹಿಸಿದ್ದ ನಟ ಅಡಿವಿ ಅವರು ಪೂಜಾ ಹೆಗ್ಡೆ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿ ಮತ್ತೆ ಸುದ್ದಿಯಾದ್ರು..
ಹೌದು..!
ಆಹಾ ಒಟಿಟಿ ಫ್ಲಾಟ್ ಫಾರ್ಮ್ ನಲ್ಲಿ ಬರುವ ಈ ಟಾಕ್ ಶೋದಲ್ಲಿ ಅಡಿವಿ ಪೂಜಾ ಬಗ್ಗೆ ನೀಡಿರುವ ಹೇಳಿಕೆಯ ತುಣುಕು ಭಾರೀ ವೈರಲ್ ಆಗಿದೆ..
ಅಡಿವಿಗೆ ಪ್ರಶ್ನೆಯೊಂದು ಬಂದಿದೆ.. ಯಾರ ಜೊತೆಗೆ ಕಿಸ್ ಮಾತ್ರ ಬೇಡವೇ ಬೇಡ ಎಂಬ ಪ್ರಶ್ನೆಯಿದಾಗಿತ್ತು.. ಉತ್ತರಿಸಿದ ಅಡಿವಿ ಯಾರಾದ್ರೂ ಓಕೆ ಆದ್ರೆ ಪೂಜಾ ಹೆಗ್ಡೆ ಜೊತೆಗೆ ಮಾತ್ರ ಕಿಸ್ ಬೇಡ್ವೇ ಬೇಡ ಎಂದು ಎಲ್ಲರನ್ನೂ ಅಚ್ಚರಿಗೀಡು ಮಾಡಿದ್ರು..
ಅಡಿವಿ ಶೇಷ್ ನೀಡಿದ ಈ ಉತ್ತರ ಕಂಡು ಕಾರ್ಯಕ್ರಮದಲ್ಲಿ ಹಾಜರಿದ್ದ ವೀಕ್ಷಕರು ನಕ್ಕರು ಹಾಗೂ ಕೆಲವರು ಆಶ್ಚರ್ಯವನ್ನು ಸಹ ವ್ಯಕ್ತಪಡಿಸಿದರು.