Rishabh Shetty : ನಟನೆಯತ್ತ ರಿಷಬ್ ಪತ್ನಿ ಪ್ರಗತಿ ಶೆಟ್ಟಿ..!!
ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಕಾಂತಾರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಯಶಸ್ವಿ ಓಟ ಮುಂದುವರೆಸಿದೆ..
ಅಂದ್ಹಾಗೆ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಈ ಸಿನಿಮಾದಲ್ಲಿ ಆರಂಭದಲ್ಲಿ ಬರುವ ರಾಜನ ಪತ್ನಿಯ ಪಾತ್ರದಲ್ಲಿ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ನಟಿಸಿ ಗಮನ ಸೆಳೆದಿದ್ದರು..
ಆದ್ರೆ ಸಕ್ರಿಯ ನಟನೆಯಲ್ಲಿ ತೊಡಗುವ ಬಗ್ಗೆ ಮಾತನಾಡಿದ್ದು ,
ಸಂದರ್ಶನವೊಂದರಲ್ಲಿ ಮಾತನಾಡುವಾಗ ಈ ಬಗ್ಗೆ ಮಾತನಾಡಿದ್ದಾರೆ..
ನಟನೆ ಕಡೆ ಆಸಕ್ತಿ ಇದೆ ಅಂತೇನಿಲ್ಲ.. ನಾನು ಈ ಬಗ್ಗೆ ಪ್ಲ್ಯಾನ್ ಮಾಡಿಕೊಂಡಿಲ್ಲ. ಸರ್ಕಾರಿ ಹಿ.ಪ್ರಾ.ಶಾಲೆ ಕಾಸರಗೋಡಿನಲ್ಲಿ ನನಗೇನು ಹೇಳದೇ ರಿಷಬ್ ಪುಟ್ಟ ಪಾತ್ರ ಮಾಡಿಸಿದ್ದರು.. ಅದು ಕೂಡ ಕಡೆಯ ಕ್ಷಣದಲ್ಲಿ..
ಕಾಂತಾರ ಎರಡು ದಿನ ಮುಂಚಿತವಾಗಿ ಹೇಳಿದ್ದರು. ಆದರೆ ನಟಿಸಲೇಬೇಕು ಯಾವುದೇ ಆಸಕ್ತಿಯಿಲ್ಲ. ಸಮಯ ಮತ್ತು ಸಂದರ್ಭಕ್ಕೆ ಅನಿವಾರ್ಯವಾಗಿದ್ದಾಗ ನಟಿಸುತ್ತೇನೆ. ಆದರೆ ಫ್ಯಾಷನ್ ಡಿಸೈನಿಂಗ್ ಕಡೆ ನನ್ನ ಗಮನವಿರುತ್ತದೆ ಎಂದಿದ್ದಾರೆ..