Tollywood Actresses : ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಟಾಲಿವುಡ್ ಟಾಪ್ ನಟಿಯರ ಲಿಸ್ಟ್..!!
ಸೌತ್ ನಟಿಯರ ಪೈಕಿ ನಯನತಾರಾ , ಅನುಷ್ಕಾ , ಸಮಂತಾ , ಕಾಜಲ್ ಹೀಗೆ ಅನೇಕ ಸ್ಟಾರ್ ನಟಿಯರು ನಮಗೆ ನೆನಪಾಗ್ತಾರೆ..
ಇತ್ತೀಚೆಗೆ ಸಮಂತಾರವರಿಂದ ಹಿಡಿದು ರಶ್ಮಿಕಾ ವರೆಗೂ ಬಾಲಿವುಡ್ , ಕಾಲಿವುಡ್ ನಲ್ಲೂ ಮಿಂಚುತ್ತಿದ್ದಾರೆ..
ಅಂದ್ಹಾಗೆ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಲಿವುಡ್ ನ ಸ್ಟಾರ್ ನಟಿಯರನ್ನ ನೋಡೋದಾದ್ರೆ
ಲಿಸ್ಟ್ ನಲ್ಲಿ ಬರುವ ಮೊದಲ ಹೆಸರೇ ಸಮಂತಾ ಅವರದ್ದು..!!
ಪ್ರಸ್ತುತ ಸಮಂತಾ, ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಲಿವುಡ್ ನಟಿಯಾಗಿದ್ದಾರೆ..
ನಟಿ ತನ್ನ ಸಂಭಾವನೆಯನ್ನು ಹೆಚ್ಚಿಸಲು ನಿರ್ಧರಿಸಿದ್ದಾರೆ ಎಂಬ ಊಹಾಪೋಹಗಳು ಹರಡಿವೆ. ಅಲ್ಲದೇ ಸ್ಟಾರ್ ನಟರ ಸಮನಾದ ಸಂಭಾವನೆಗೆ ಬೇಡಿಕೆಯಿಟ್ಟಿರುವುದು ಗೊತ್ತಾಗಿದೆ.. ಸ್ಯಾಮ್ ಈ ಹಿಂದೆ ಪ್ರತಿ ಯೋಜನೆಗೆ 3-4 ಕೋಟಿ ರೂ. ಚಾರ್ಜ್ ಮಾಡ್ತಿದ್ದರು.. ಪುಷ್ಪಾದಲ್ಲಿ ಕೇವಲ ವಿಶೇಷ ಹಾಡೊಂದಕ್ಕೆ 1.5 ಕೋಟಿ ಪಡೆದಿದ್ದರು ಎನ್ನಲಾಗಿತ್ತು..
ಇದೀಗ , ಅವರು 8 ಕೋಟಿ ರೂ. ಗೆ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ..
ಸಮಂತಾ ತನ್ನ ಮುಂಬರುವ ಪ್ರಾಜೆಕ್ಟ್ಗಳಿಗಾಗಿ ತನ್ನ ಸಂಭಾವನೆ ಹೆಚ್ಚಿಸಿಕೊಂಡಿದ್ದಾರಂತೆ.
8 ಕೋಟಿಯಿಂದ 10 ಕೋಟಿಗೆ ಹೆಚ್ಚಿಸುತ್ತಿದ್ದಾಳೆ ಎಂದು ಹೇಳಲಾಗುತ್ತಿದೆ.
ಆದ್ರೆ ಟಾಲಿವುಡ್ ಹೊರತಾಗಿ ಸೌತ್ ನಟಿಯೆಂದು ನೋಡಿದರೆ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಲೇಡಿ ಸೂಪರ್ ಸ್ಟಾರ್ ನಯನತಾರಾ.. ತಮಿಳು ನಟಿ ನಯನತಾರಾ ಅವರು ಪ್ರತಿ ಚಿತ್ರಕ್ಕೆ 10 ರಿಂದ 11 ಕೋಟಿ ರೂ. ಚಾರ್ಜ್ ಮಾಡ್ತಾರಂತೆ.. ಇತ್ತೀಚಿನ ವರದಿಗಳ ಪ್ರಕಾರ, ಸಮಂತಾ ಮತ್ತು ನಯನತಾರಾ ಈಗ ಒಂದೇ ವೇತನ ಶ್ರೇಣಿಯಲ್ಲಿದ್ದಾರೆ ಎನ್ನಲಾಗ್ತಿದೆ..
ಇವರ ನಂತರ ಪೂಜಾ ಹೆಗ್ಡೆ – ಪ್ರತಿ ಸಿನಿಮಾಗೂ 5 ಕೋಟಿ ಚಾರ್ಜ್ ಮಾಡ್ತಾರೆ ಎನ್ನಲಾಗಿದೆ..
ಅನುಷ್ಕಾ ಶೆಟ್ಟಿ -4 ಕೋಟಿ
ರಕುಲ್ ಪ್ರೀತ್ ಸಿಂಗ್ – 3.5 ಕೋಟಿ
ರಶ್ಮಿಕಾ – 3 ಕೋಟಿ ರೂ
ಕಾಜಲ್ ಅಗರ್ವಾಲ್ – 1.5 ರಿಂದ 4 ಕೋಟಿ
ಶ್ರುತಿ ಹಾಸನ್ – 1-2.5 ಕೋಟಿ
ಸಾಯಿ ಪಲ್ಲವಿ – 1-2 ಕೋಟಿ
ಚಾರ್ಜ್ ಮಾಡ್ತಾರಂತೆ ..