Kalagathalaivan : ಉದಯನಿಧಿ ಸ್ಟಾಲಿನ್ ಕಲಾಗತಲೈವನ್ ರಿಲೀಸ್..!!
ಉದಯನಿಧಿ ಸ್ಟಾಲಿನ್ ಅಭಿನಯದ ಕಲಾಗತಲೈವನ್ ನವೆಂಬರ್ 18 ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗ್ತಿದೆ.. ಮಾಗಿಜ್ ತಿರುಮೇನಿ ನಿರ್ದೇಶನದ ಈ ಚಿತ್ರದ ಟೀಸರ್ ಅನ್ನು ಎರಡು ವಾರಗಳ ಹಿಂದೆ ಬಿಡುಗಡೆ ಮಾಡಲಾಗಿತ್ತು..
ಮತ್ತು ಈಗ ಅದರ ಟ್ರೈಲರ್ ನವೆಂಬರ್ 10 ರಂದು ಅದ್ಧೂರಿ ಕಾರ್ಯಕ್ರಮದ ಮೂಲಕ ಬಿಡುಗಡೆ ಮಾಡಲಾಗುವುದು.
ಕಲಾಗತಲೈವನ್ ನಲ್ಲಿ ನಾಯಕಿಯಾಗಿ ನಿದ್ಧಿ ಅಗರ್ವಾಲ್ ನಟಿಸಿದ್ದರೆ, ಆರವ್ ನಫೀಜ್ ಪ್ರಮುಖ ಪಾತ್ರದಲ್ಲಿದ್ದಾರೆ. ಈ ಚಿತ್ರದ ಬಿಡುಗಡೆಯ ನಂತರ, ಉದಯನಿಧಿ ಅವರು ಜನವರಿಯಿಂದ ಕಮಲ್ ಹಾಸನ್ ನಿರ್ಮಾಣದ ತಮ್ಮ ಪ್ರಾಜೆಕ್ಟ್ ಗೆ ತೆರಳಲಿದ್ದಾರೆ.