Yash : ಬಾಲಿವುಡ್ ಆಟ ಮುಗಿಯಿತು ಎಂಬ ಮಾತಿಗೆ ಯಶ್ ಖಡಕ್ ಪ್ರತಿಕ್ರಿಯೆ..!!
ಬಾಲಿವುಡ್ ಆಟ ಮುಗಿದಿದೆ..
ಸೌತ್ ಮುಂದೆ ಬಾಲಿವುಡ್ ಖೇಲ್ ಖತಮ್..
ಹಾಗೆ ನೋದ್ರೆ ಬ್ರಹ್ಮಾಸ್ತ್ರ ಸಿನಿಮಾ ಹಿಟ್ ಆಗಿದ್ದು ಬಿಟ್ರೆ ಈ ವರ್ಷ ಬಾಲಿವುಡ್ ಸಿನಿಮಾಗಲೆಲ್ಲವೂ ಸೋಲುಂಡಿದ್ದೇ..
ಅಟ್ಟರ್ , ಫ್ಲಾಪ್ , ಡಿಸಾಸ್ಟರ್..
ಬಾಲಿವುಡ್ ಸಿನಿಮಾಗಳಿಗೆ ಸೋಲುಣಿಸಿದ್ದು ಸೌತ್ ಸಿನಿಮಾಗಳೇ ಅದ್ರಲ್ಲೂ ಹೆಚ್ಚು ಕನ್ನಡ ಸಿನಿಮಾಗಳನ್ನೋದೇ ವಿಶೇಷ..
ಒಂದು ಕಾಲದಲ್ಲಿ ಸೌತ್ ಸ್ಟಾರ್ ಗಳನ್ಗನ ಇಲ್ಲಿನ ಸಿನಿಮಾಗಳನ್ನ ಕಡೆಗಣಿಸಿದ್ದ ಇದೇ ಸೋ ಕಾಲ್ಡ್ ಬಾಲಿವುಡ್ ಮಂದಿ ಈಗ ಸೌತ್ ಸ್ಟಾರ್ ಗಳ ಜೊತೆಗೆ ಕೊಲಾಬರೇಟ್ ಮಾಡೋದಕ್ಕೆ ದುಂಬಾಲು ಬಿದ್ದಿದ್ದಾರೆ.. ಅಲ್ಲಿನ ನಿರ್ಮಾಕರು ಯಶ್ ,ರಿಷಬ್ , ಪ್ರಭಾಸ್ , ಮಹೇಶ್ ಬಾಬು , ರಾಮ್ ಚರಣ್ , ಅಲ್ಲು ಅರ್ಜುನ್ ಹಿಂದೆ ಬಿಗ್ ಆಫರ್ ಗಳನ್ನ ಹಿಡಿದು ಬಂದ್ರೂ ರಿಜೆಕ್ಟ್ ಮಾಡುತ್ತಿದ್ದಾರೆ..
ಹೀಗೆ ಬಾಲಿವುಡ್ ದಿನೇ ದಿನೇ ತನ್ನ ಕರ್ಮಗಳಿಂದಲೇ ತನ್ನ ಅಸ್ತಿತ್ವ ಕಳೆದುಕೊಳ್ತಿದೆ..
ಕಾಂತಾರ , KGF 2 , RRR , ಪುಷ್ಪ ದಂತಹ ಸಿನಿಮಾಗಖಳ ಕ್ರೇಜ್ ಎದುರು ಬಾಲಿವುಡ್ ನ ಜನ ಮರೆಯುತ್ತಿದ್ದಾರೆ..
ಈ ನಡುವೆ ಯಶ್ ಅವರಿಗೆ ಸಂದರ್ಶನವೊಂದ್ರಲ್ಲಿ ಪ್ರಶ್ನೆ ಎದುರಾಗಿತ್ತು.. ದಕ್ಷಿಣ ಸಿನಿಮಾಗಳು ಆರ್ಭಟಿಸುತ್ತಿವೆ.. ಬಾಲಿವುಡ್ ಆಟ ಮುಗಿದಿದೆ.. ಎಂದಾಗ KGF ಬ್ಲಾಕ್ ಬಸ್ಟರ್ ಆದ ಮಾತ್ರಕ್ಕೆ ಅದರ ಯಶಸ್ಸನ್ನು ತಲೆಗೆ ಹಾಕಿಕೊಳ್ಳಲು ಬಿಡುವುದಿಲ್ಲ , ಮತ್ತೊಂದು ಎಲ್ಲಾ ಇಂಡಸ್ಟ್ರಿಗಳ ನಡುವಿನ ಗಡಿರೇಖೆಯನ್ನ ತೊಡೆದುಹಾಕಲು ಬಯಸುತ್ತೇನೆ ಎಂದಿದ್ದಾರೆ..
ಅವರು ಪ್ರಸ್ತುತ ಪ್ರೇಕ್ಷಕರು ಉತ್ತಮ ಚಲನಚಿತ್ರಗಳನ್ನು ಬಯಸುತ್ತಾರೆ. ಆ ಸಿನಿಮಾ ಯಾವ ಿಂಡಸ್ಟ್ರಿಯಿಂದಲೇ ಬಂದರು ಉತ್ತಮ ಸಿನಿಮಾವಾದ್ರೆ ಜನರು ಸ್ವಾಗತಿಸುತ್ತಾರೆ ಎಂದಿದ್ದಾರೆ..
ನನಗೆ ಬಾಲಿವುಡ್, ಸ್ಯಾಂಡಲ್‌ವುಡ್‌ನಲ್ಲಿ ನಂಬಿಕೆ ಇಲ್ಲ, ಈ ‘ವುಡ್’ಗಳಲ್ಲಿ ನನಗೆ ನಂಬಿಕೆ ಇಲ್ಲ. ಈ ವುಡ್ ನ ಸುಡೋಣ.. ನಾವು ನಮ್ಮ ಗೌರವಕ್ಕಾಗಿ ಹೋರಾಡಿದ್ದೇವೆ, ದಯವಿಟ್ಟು ಈ ದೇಶದಲ್ಲಿ ಪ್ರತಿಯೊಬ್ಬ ನಟನನ್ನು ನಡೆಸಿಕೊಳ್ಳುವಂತೆ ನಮ್ಮನ್ನು ನೋಡಿಕೊಳ್ಳಿ. ಮುಖ್ಯ ವಿಷಯವೆಂದರೆ, ನಾವು ಒಳ್ಳೆಯದನ್ನು ಮಾಡೋಣ. ಕೆಲಸ. ಅದು ಬಾಲಿವುಡ್, ಕರ್ನಾಟಕ ಅಥವಾ ಬೇರೆ ಯಾವುದೇ ರಾಜ್ಯದಿಂದ ಬಂದಿರಲಿ ಪ್ರೇಕ್ಷಕರು ಸ್ವೀಕರಿಸುತ್ತಾರೆ ಎಂದಿದ್ದಾರೆ..