Yash ಸಿನಿಮಾಗೆ ಫಿಕ್ಸ್ ಆಗಿದ್ದ ಟೈಟಲ್ ‘ರಾಣಾ’ ಕೆ ಮಂಜು ಪುತ್ರನ ಪಾಲಾಗಿದ್ದು ಹೇಗೆ..??
ರಾಕಿಂಗ್ ಸ್ಟಾರ್ ಯಶ್ ಅವರ ಮೇನಿಯಾ ಆಲ್ ಓವರ್ ಇಂಡಿಯಾ ಇದೆ.. KGF ನಂತರ ಯಶ್ ನ್ಯಾಷನ್ಲ್ ಸ್ಟಾರ್ ಆಗಿದ್ದು , ದೇಶದ ಮೂಲೆಮೂಲೆಗಳಲ್ಲೂ ರಾಕಿ ಅಭಿಮಾನಿಗಳಿದ್ದಾರೆ..
ಯಶ್ ಸಿನಿಮಾದ ಮುಂದಿನ ಅಪ್ ಡೇಟ್ ಗಳಿಗಾಗಿ ಕಾಯ್ತಿದ್ದಾರೆ..
ಇತ್ತ KGF ನ ಸಕ್ಸಸ್ ನ ನಂತರ ಯಶ್ ಕೆಲ ಪ್ರಾಜೆಕ್ಟ್ ಗಳನ್ನ ಕೈ ಬಿಟ್ಟಿದ್ದರು ಎನ್ನಲಾಗಿತ್ತು.. ಅದೇ ರೀತಿ ರಾಣ ಎಂಬ ಸಿನಿಮಾದಲ್ಲಿ ಯಶ್ ನಟಿಸಲಿದ್ದರು ಎನ್ನಲಾಗಿತ್ತು..
ಸದ್ಯ ಅವರ ಸಿನಿಮಾಗೆ ಫಿಕ್ಸ್ ಆಗಿದ್ದ ರಾಣ ಟೈಟಲ್ ಮಾತ್ರ ಕೆ ಮಂಜು ಪುತ್ರನ ಪಾಲಾಗಿದೆ..
ಈ ವಾರ ಕೂಡ ಕನ್ನಡದಲ್ಲಿ ಹಲವು ಸಿನಿಮಾಗಳು ರಿಲೀಸ್ ಆಗುತ್ತಿವೆ. ಇದರಲ್ಲಿ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ನಟಿಸಿರೋ ಮೂರನೇ ಸಿನಿಮಾ ರಾಣಾ ಕೂಡ ಒಂದು.. ಪೋಸ್ಟರ್ ಟೈಟಲ್ ನಿಂದಲೇ ಚರ್ಚೆಯಾಗ್ತಿದೆ..
ಶ್ರೇಯಸ್ ಅಭಿನಯದ ರಾಣಾ ಸಿನಿಮಾ ಸಖತ್ ಗಮನ ಸೆಳೆಯುತ್ತಿದೆ..
ಅಂದ್ಹಾಗೆ ರಾಣ ಟೈಟಲ್ ನಲ್ಲಿ ಯಶ್ ಸಿನಿಮಾ ಮಾಡಬೇಕಲಿತ್ತು.. ರಮೇಶ್ ಕಶ್ಯಪ್ ಅವರ ಬಳಿ ಈ ಟೈಟಲ್ ಇತ್ತು..
ರಾಕಿಂಗ್ ಸ್ಟಾರ್ ಯಶ್ ಗೆ ಭಜರಂಗಿ ಖ್ಯಾತಿಯ ಎ ಹರ್ಷ ನಿರ್ದೇಶನ ಮಾಡಬೇಕಿತ್ತು. ಆದರೆ, ಸಿನಿಮಾ ಟೇಕಾಫ್ ಆಗಲಿಲ್ಲ. ಹೀಗಾಗಿ ರಮೇಶ್ ಕಶ್ಯಪ್ ರಾಣ ಸಿನಿಮಾವನ್ನು ಅಲ್ಲಿಗೆ ಕೈ ಬಿಟ್ಟಿದ್ದರು. ಬಳಿಕ ಅದೇ ಟೈಟಲ್ ಅನ್ನು ನಿರ್ಮಾಪಕ ಕೆ ಮಂಜುಗೆ ಕೊಟ್ಟಿದ್ದರು.
ಕೆ ಮಂಜು ಪುತ್ರ ಶ್ರೇಯಸ್ ನಟನೆಯ ಮೂರನೇ ಸಿನಿಮಾವನ್ನು ಪುರುಷೋತ್ತಮ್ ನಿರ್ಮಾಣ ಮಾಡಲು ಮುಂದಾಗಿದ್ದರು. ನಂದ ಕಿಶೋರ್ ನಿರ್ದೇಶನ ಮಾಡ್ತಿದ್ದಾರೆ.. ಟೈಟಲ್ ಇಡಬೇಕೆಂದುಕೊಂಡಾಗ ರಾಣ ಟೈಟಲ್ ಇಡಬೇಕು ಅಂದುಕೊಂಡಿದ್ದರು. ಅದು ರಮೇಶ್ ಕಶ್ಯಪ್ ಅವರ ಬಳಿ ಇತ್ತು. ಅವರಿಂದ ಕೆ ಮಂಜು ಈ ಟೈಟಲ್ ತೆಗೆದುಕೊಂಡು ಮಗನ ಸಿನಿಮಾ ಇಟ್ಟಿದ್ದಾರೆ.
ಅಂದ್ಹಾಗೆ ರಾಣ ಅನ್ನೋದು ಒಂದು ಪವರ್ ಫುಲ್ ಹಾಗೂ ಮಾಸ್ ಟೈಟಲ್.. ಇದು ಯಶ್ ಅವರ ಮ್ಯಾನರಿಸಮ್ ಗೆ ಸರಿಯಾಗಿ ಸ್ಯೂಟ್ ಆಗ್ತಿತ್ತು.. ಒಂದೊಮ್ಮೆ ಈ ಸಿನಿಮಾ ಆಗಿದ್ದರೆ ಯಶ್ ಅವರ ಮಾಸ್ ಸಿನಿಮಾಗಳ ಲಿಸ್ಟ್ ನಲ್ಲಿ ಮತ್ತೊಂದು ಪವರ್ ಫುಲ್ ಸಿನಿಮಾ ಇರುತ್ತಿತ್ತು..