BBK9 : ರೂಪೇಶ್ ರಾಜಣ್ಣಗೆ ಕ್ಲಾಸ್ ಕ್ಲಾಸ್ ತೆಗೆದುಕೊಂಡಿದ್ಯಾಕೆ ಗುರೂಜಿ..??
ಬಿಗ್ ಬಾಸ್ ಮನೆಯಲ್ಲಿ ಯಾರು ಫೇಕ್ ಯಾರು ರಿಯಲ್ ಎಂಬ ಟಾಸ್ಕ್ ನಡೆಯುತ್ತಿದ್ದು , ಈ ಟಾಸ್ಕ್ ನಿಂದಾಗಿ ಮನೆಯಲ್ಲಿ ಬೆಂಕಿ ಹೊತ್ತಿಕೊಂಡ ವಾತಾರವರಣ ನಿರ್ಮಾಣವಾಗಿದೆ..
ಯಾರು ಫೇಕ್ , ಯಾರು ರಿಯಲ್ ಎಂಬ ಟಾಸ್ಕ್ ನಲ್ಲಿ ರೂಪೇಶ್ ರಾಜಣ್ಣ ದಿವ್ಯಾ ಅವರನ್ನ ಫೇಕ್ ಎಂದಿದ್ದು , ದಿವ್ಯಾ ಗಳಗಳನೆ ಅತ್ತಿದ್ದಾರೆ..
ಈ ವಾರ ಬಿಗ್ ಬಾಸ್ ಸಿಂಗಲ್ ಆಗಿ ಆಡುವ ಆಟ ಕೊಟ್ಟಿದ್ದಾರೆ. ಎಲ್ಲರಿಗೂ ಯೋಗ ಇದೆ. ಬಹುಮತ ಕೊಡೋರು ಬೇಕು ಅಷ್ಟೇ. ಗೇಮ್ನಲ್ಲಿ ಪ್ಲಾನ್ ಮುಖ್ಯ. ದ್ವೇಷ, ಪ್ರೀತಿ, ಕೋಪ ಯಾವುದೂ ಮುಖ್ಯ ಅಲ್ಲ. ಸಿಂಪಥಿ ವೋಟ್ ನ ಜಾಸ್ತಿ ತೆಗೆದುಕೊಳ್ಳುವವರು ಇದ್ದಾರೆ. ಸಣ್ಣ ಪದವನ್ನ ದೊಡ್ಡದಾಗಿ ಬಳಸಿಕೊಳ್ಳುತ್ತಾರೆ. ಅದಕ್ಕೆ ಹೊಣೆಯಾಗಿ ಕಸಿವಿಸಿ ಮಾಡಿಕೊಳ್ಳಬೇಡಿ. ತಾಳ್ಮೆಯಿಂದ ಮಾತನಾಡಿ, ಎಂದು ರೂಪೇಶ್ ರಾಜಣ್ಣ ಅವರಿಗೆ ಆರ್ಯವರ್ಧನ್ ಗುರೂಜಿ ಪಾಠ ಮಾಡಿದರು.