BiggBoss Kannada 9 : ರೂಪೇಶ್ ಶೆಟ್ಟಿಗೆ ಶಿಕ್ಷೆ , ಇದೇ ತಪ್ಪು ಮಾಡಿದ್ದ ರೂಪೇಶ್ ರಾಜಣ್ಣಗೆ ಶಿಕ್ಷೆ ಯಾಕಿಲ್ಲ..??
ಸದ್ಯ ಸಾನ್ಯಾ ಐಯರ್ ಎಲಿಮಿನೇಷನ್ ದುಃಖದಲ್ಲಿರುವ ರೂಪೇಶ್ ಶೆಟ್ಟಿಗೆ ಇತ್ತೀಚೆಗೆ ಬಿಗ್ ಬಾಸ್ ಶಿಕ್ಷೆಯೊಂದನ್ನ ನೀಡಿದೆ..
ಗಾಜಿನ ಲೋಟ ಒಡೆದು ಹಾಕಿರುವ ತಮಗೆ ಬಿಗ್ ಬಾಸ್ ನೀಡಿರುವ ಶಿಕ್ಷೆ ಕೇಳಿ ರೂಪೇಶ್ ಶಾಕ್ ಆಗಿದ್ದಾರೆ..
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಒಂದಷ್ಟು ವಸ್ತುಗಳನ್ನು ನೀಡಲಾಗುತ್ತದೆ. ಇದನ್ನು ಹಾಳು ಮಾಡಿದರೆ ತಪ್ಪಿತಸ್ಥರಿಗೆ ಬಿಗ್ ಬಾಸ್ ಶಿಕ್ಷೆ ನೀಡುತ್ತಾರೆ.
ಈಗ ರೂಪೇಶ್ ಶೆಟ್ಟಿ ಅವರು ಮನೆಯ ಗಾಜಿನ ಲೋಟವನ್ನು ಒಡೆದು ಹಾಕಿದ್ದಾರೆ. ಇದನ್ನು ಬಿಗ್ ಬಾಸ್ ಗಮನಿಸಿದ್ದು ಕಾಫಿ ಕಪ್ ನ ಗಾತ್ರದ ಲೋಟ ಕೊಟ್ಟಿದ್ದಾರೆ.. ಅದರಲ್ಲಿ ಮಾತ್ರ ನೀರು ಕುಡಿಯುವಂತೆ ಆದೇಶ ಹೊರಡಿಸಿದ್ದಾರೆ.. ಇದರಲ್ಲೇ ರೂಪೇಶ್ ನೀರು ಕುಡಿಯುತ್ತಿದ್ದಾರೆ..
ಆದ್ರೆ ಈ ಹಿಂದೆ ರೂಪೇಶ್ ರಾಜಣ್ಣ ಕೂಡ ಗ್ಲಾಸ್ ಒಡೆದಿದ್ದರು. ಅವರಿಗೆ ಬಿಗ್ ಬಾಸ್ ಶಿಕ್ಷೆ ನೀಡಲಿಲ್ಲ ಯಾಕೆ ಎಂಬುದು ರೂಪೇಶ್ ಪ್ರಶ್ನೆ.. ಹಾಗೆ ವೀಕ್ಷಕರು ಅಭಿಮಾನಿಗಳ ಪ್ರಶ್ನೆ..