Dolly Dhanajay : ನನ್ನ ಬೈದವರು ಚೆನಾಗಿರಲಿ ಎಂದಿದ್ದೇಕೆ ಡಾಲಿ..??
ಸದ್ಯ ಡಾಲಿ ಧನಂಜಯ್ ಹೆಡ್ ಬುಷ್ ಸಿನಿಮಾ ತ್ತಮ ರೆಸ್ಪಾನ್ಸ್ ಪಡೆದಿದ್ರೆ , ಇತ್ತ ನಟ ರಾಕ್ಷಸ ಹೊಯ್ಸಳ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.. ಇತ್ತೀಚೆಗೆ ಉತ್ತರಕಾಂಡ ಸಿನಿಮಾದ ಮುಹೂರ್ತ ನೆರವೇರಿದೆ.. ಈ ಸಿನಿಮಾದಲ್ಲಿ ಡಾಲಿಗೆ ರಮ್ಯಾ ನಾಯಕಿಯಾಗಿದ್ದು , ಇದು ಮೋಹಕತಾರೆಯ ಕಮ್ ಬ್ಯಾಕ್ ಸಿನಿಮಾವೂ ಕೂಡ ಹೌದು..!!
ಇಂದು ಕನಕದಾಸರ ಜಯಂತಿಯಾಗಿದ್ದು , ಕನಕ ದಾಸರನ್ನ ನೆನಪು ಮಾಡಿಕೊಂಡಿರುವ ವರ್ಸಟೈಲ್ ನಟ ಡಾಲಿ , ‘ಹಿಂದೆ ನನ್ನ ಬೈದವರೆಲ್ಲ ಚೆಂದಾಗಿರಲಿ, ಮುಂದೆ ನನ್ನ ಬಯ್ಯುವರೆಲ್ಲ ಅಂದಣವೇರಲಿ, ಕುಂದು ಇಟ್ಟವರೆಲ್ಲ ಕುದುರೆಯ ಕಟ್ಟಿ ಬಾಳಲಿ, ಬಂದು ಒದ್ದವರಿಗೆ ಭತ್ತದ ಗದ್ದೆ ಬೆಳೆಯಲಿ. ಜನರೊಳಗೆ ಮಾನಭಂಗ ಮಾಡಿದವರಿಗೆ ಜೇನು ತುಪ್ಪ, ಸಕ್ಕರೆ ಊಟ ಆಗಲಿ ಅವರಿಗೆ. ಹಾನಿ ಬಾರದಂತಹ ಲೋಕ ಆಗಲಿ ಅವರಿಗೆ. ಮಹಾನುಭಾವ ಮುಕ್ತಿಯ ಕೊಡುವ ನೆಲೆಯಾದಿಕೇಶವ ಎಂದು ಹೇಳಿದ್ದು , ಈ ಮೂಲಕ ತಮ್ಮ ವಿರೋಧಿಗಳಿಗೆ ಪರೋಕ್ಷವಾಗಿಯೇ ಟಾಂಗ್ ಕಲೊಟ್ಟಿದ್ದಾರೆ..