Jacqueline Fernandiz : ‘ರಕ್ಕಮ್ಮ’ನಿಗೆ ನ್ಯಾಯಾಲಯದಿಂದ ತಾತ್ಕಾಲಿಕ ರಿಲೀಫ್..!!!
ಬಹುಕೋಟಿ ವಂಚನೆ ಪ್ರಕರಣದಲ್ಲಿ ಆರೋಪಿ ಸುಕೇಶ್ ಚಂದ್ರ ಜೊತೆಗಿನ ಪ್ತೆಯಿಂದ ಸಂಕಷ್ಟಕ್ಕೆ ಸಿಲುಕಿ ತಾವೂ ಕೂಡ ಆರೋಪಿ ಸ್ಥಾನದಲ್ಲಿರುವ ವಿಕ್ರಾಂತ್ ರೋಣದ ಬೆಡಗಿ ಬಾಲಿವುಡ್ ನ ಗ್ಲಾಮರಸ್ ಗೊಂಬೆ ಜಾಕ್ವೆಲಿನ್ ಫರ್ನಾಂಡೀಸ್ ಗೆ ಇದೀಗ ನ್ಯಾಯಾಲಯದಿಂದ ತಾತ್ಕಾಲಿಕ ರಿಲೀಫ್ ಸಿಕ್ಕಿದೆ..
ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಜಾಮೀನು ಅರ್ಜಿ ವಿಚಾರಣೆ ನವೆಂಬರ್ 15ಕ್ಕೆ ಮುಂದೂಡಲಾಗಿದೆ. ಅಲ್ಲಿವರೆಗೂ ನಟಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದ್ದು, ನವೆಂಬರ್ 15ರಂದು ಏನಾಗಲಿದೆ ಎನ್ನುವ ಆತಂಕ ಜಾಕ್ವೆಲಿನ್‌ಗೆ ಶುರುವಾಗಿದೆ.