Kantara : ರಿಷಬ್ ಬದಲು ಪುನೀತ್ ಶಿವ ಆಗಿದ್ರೆ..!! ಹೀಗಿರುತ್ತಿದ್ರಾ..??
ದೇಶಾದ್ಯಂತ ಹೊಸ ಸಂಚಲನ ಸೃಷ್ಟಿ ಕಾಂತಾರ ಅಲೆಯಲ್ಲಿ ತೇಲುವಂತೆ ಮಾಡಿದ ರಿಷಬ್ ಶೆಟ್ಟಿ ಅವರನ್ನ , ಅವರ ನಟನೆ ನಿರ್ದೇಶನವನ್ನ ಜನ ಕೊಂಡಾಡುತ್ತಿದ್ದಾರೆ..
ಬಾಕ್ಸ್ ಆಫೀಸ್ ನಲ್ಲಿ ಕಾಂತಾರ ಸೌಂಡ್ ಭಾರೀ ಇದೆ..
ಮೇಕಿಂಗ್ ಇಂದ ಹಿಡಿದು ಮ್ಯುಸಿಕ್ ವರೆಗೂ ಸಿನಿಮಾ ಜನರ ಮನಗೆದ್ದಿದೆ..
ಅಂದ್ಹಾಗೆ ಈ ಸಿನಿಮಾದಲ್ಲಿ ಮೊದಲಿಗೆ ಶಿವನ ಪಾತ್ರ ಅಂದ್ರೆ ರಿಷಬ್ ಶೆಟ್ಟಿ ನಿರ್ವಹಿಸಿರುವ ಪಾತ್ರವನ್ನ ಪುನೀತ್ ರಾಜ್ ಕುಮಾರ್ ಅವರು ಮಾಡಬೇಕಿತ್ತು ಅಂತಲೇ ಹೇಳಲಾಗಿತ್ತು..
ಹಿಗೊಂದು ಸುದ್ದಿ ಹರಿದಾಡಿದ್ದೇ ತಡ , ಪುನೀತ್ ರಾಜ್ ಕುಮಾರ್ ಅವರು ಈ ಪಾತ್ರ ನಿರ್ವಹಿಸಿದ್ದರೆ , ಕೊನೆಯ ಕ್ಲೈಮ್ಯಾಕ್ಸ್ ನಲ್ಲಿ ರಿಷಬ್ ಶೆಟ್ಟಿ ಅವರು ಬಣ್ಣ ಹಚ್ಚಿರುವ ಪಾತ್ರದಲ್ಲಿ ಅಪ್ಪು ಹೇಗೆ ಕಾಣಿಸುತ್ತಿದ್ದರು ಎಂದೇ ಅಭಿಮಾನಿಗಳು ಊಹಿಸಿಕೊಳ್ತಿದ್ದರು..
ಇದೀಗ ಫ್ಯಾನ್ ಮೇಡ್ ಪೋಸ್ಟರ್ ಒಂದು ಹರಿದಾಡ್ತಿದ್ದು , ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.. ಸಖತ್ ಗಮನ ಸೆಳೆಯುತ್ತಿದೆ.. ಪುನೀತ್ ರಾಜ್ ಕುಮಾರ್ ಅವರು ಈ ಪಾತ್ರ ನಿರ್ವಹಿಸುತ್ತಿದ್ದರೆ ಹೀಗಿರುತ್ತಿದ್ದರು ಎಂಬುದಕ್ಕೆ ಫ್ಯಾನ್ ಮೇಡ್ ಪೋಸ್ಟರ್ ತಯಾರಾಗಿ ವೈರಲ್ ಆಗ್ತಿದ್ದು , ಫ್ಯಾನ್ಸ್ ಗಮನ ಸೆಳೆಯುತ್ತಿದೆ..
ಅಂದ್ಹಾಗೆ ಈ ಪೋಸ್ಟರ್ ಡಿಸೈನ್ ಮಾಡಿರುವುದು ಡಿಜಿಟಲ್ ಆರ್ಟಿಸ್ಟ್ ಕುಶಾಲ್ ಹಿರೇಮಠ್ ಎಂಬುವವರು.. ಪುನೀತ್ ಅವರ ಬೇರೆ ಫೋಟೋವನ್ನು ಬಳಸಿಕೊಂಡು ಈ ರೀತಿ ವಿನ್ಯಾಸ ಮಾಡಲಾಗಿದೆ.