Kantara : ಮತ್ತೊಂದು ದಾಖಲೆ – 1 ಕೋಟಿ ಟಿಕೆಟ್ ಮಾರಾಟ..!!
ದೇಶಾದ್ಯಂತ ಹೊಸ ಸಂಚಲನ ಸೃಷ್ಟಿ ಕಾಂತಾರ ಅಲೆಯಲ್ಲಿ ತೇಲುವಂತೆ ಮಾಡಿದ ರಿಷಬ್ ಶೆಟ್ಟಿ ಅವರನ್ನ , ಅವರ ನಟನೆ ನಿರ್ದೇಶನವನ್ನ ಜನ ಕೊಂಡಾಡುತ್ತಿದ್ದಾರೆ..
ಬಾಕ್ಸ್ ಆಫೀಸ್ ನಲ್ಲಿ ಕಾಂತಾರ ಸೌಂಡ್ ಭಾರೀ ಇದೆ..
ಮೇಕಿಂಗ್ ಇಂದ ಹಿಡಿದು ಮ್ಯುಸಿಕ್ ವರೆಗೂ ಸಿನಿಮಾ ಜನರ ಮನಗೆದ್ದಿದೆ..
ದಿನದಿಂದ ದಿನಕ್ಕೆ ಹೊಸ ದಾಖಲೆ ಬರೆಯುತ್ತಿರುವ ಕಾಂತಾರ ಇದೀಗ ಮತ್ತೊಂದು ದಾಖಲೆಯನ್ನ ತನ್ನ ಹೆಸರಿಗೆ ಬರೆದುಕೊಂಡಿದೆ..
ಇಲ್ಲಿಯವರೆಗೂ ಕರ್ನಾಟಕದಲ್ಲೇ ಸಿನಿಮಾದ ಒಂದು ಕೋಟಿ ಟಿಕೆಟ್ ಮಾರಾಟವಾಗಿದೆ..
ಈ ಮೂಲಕ ಬಹುತೇಕ ದಾಖಲೆಗಳನ್ನು ಕಾಂತಾರ ಪುಡಿಪುಡಿ ಮಾಡಿ ಮುನ್ನುಗ್ಗುತ್ತಿದೆ.