Malaika Arora : 2 ನೇ ಮದುವೆಗೆ ಒಪ್ಪಿದ್ರಾ ಮುನ್ನಿ..?? ಈ ಪೋಸ್ಟ್ ಅರ್ಥವೇನು..??
ಬಾಲಿವುಡ್ ನಟಿ ಮಲೈಕಾ ಅರೋರಾ ಸದ್ಯ ಯುವ ನಟ ವಯಸ್ಸಿನಲ್ಲಿ ತಮಗಿಂತಲೂ ಬಹಳವೇ ಚಿಕ್ಕವರಾದ ಅರ್ಜುನ್ ಕಪೂರ್ ಅವರ ಜೊತೆಗೆ ಡೇಟಿಂಗ್ ನಲ್ಲಿರುವ ವಿಚಾರ ಗೊತ್ತೇ ಇದೆ.. ವರ್ಷಗಳ ಹಿಂದೆ ಅವರು ಸಲ್ಮಾನ್ ಸಹೋದರ ಅರ್ಬಾಜ್ ಜೊತೆಗಿನ 19 ವರ್ಷಗಳ ದಾಂಪತ್ಯವನ್ನ ಮುರಿದುಕೊಂಡು ಡಿವೋರ್ಸ್ ಪಡೆದಿದ್ದರು..
ಡಿವೋರ್ಸ್ ಗೂ ಮೊದಲೇ ಅವರು ಕದ್ದು ಮುಚ್ಚಿ ಅರ್ಜುನ್ ಕಪೂರ್ ಜೊತೆಗೆ ಓಡಾಡುತ್ತಿದ್ದರು ಎನ್ನಲಾಗಿತ್ತು.. ಇದೇ ಕಾರಣಕ್ಕೆ ಡಿವೋರ್ಸ್ ಆಗಿತ್ತು ಎನ್ನಲಾಗಿತ್ತು.. ಆ ನಂತರ ಅರ್ಜುನ್ ಹಾಗೂ ಮಲೈಕಾ ಬಹಿರಂಗವಾಗಿಯೇ ಓಡಾಟ ಶುರು ಮಾಡಿದ್ದರು..
ಇದೀಗ ವರಿಬ್ಬರೂ ಶೀಘ್ರವೇ ಮದುವೆಯಾಗುತ್ತಾರಾ ಎಂಬ ಸುದ್ದಿ ಹರಿದಾಡ್ತಿದೆ,.. ಇದಕ್ಕೆ ಕಾರಣ ಮಲೈಕಾ ನಾಚಿ ನೀರಾಗಿರುವಂತಹ ಫೋಟೋ ಒಂದನ್ನ ಪೋಸ್ಟ್ ಮಾಡಿ ಐ ಸೆಡ್ ಎಸ್ ( ಒಪ್ಪಿಗೆ ಸೂಚಿಸಿದ್ದೇನೆ ) ಎಂದು ಬರೆದುಕೊಂಡಿದ್ದಾರೆ..
ಮಲೈಕಾ ಅರೋರ ತನಗಿಂತ 12 ವರ್ಷ ಚಿಕ್ಕವನಾದ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ನಡೆಸುತ್ತಿರುವುದು ಸಾಕಷ್ಟು ಚರ್ಚೆ ಹುಟ್ಟಾಕಿತ್ತು.
ಅರ್ಜುನ್- ಮಲೈಕಾ ಎಂಗೇಜ್ಮೆಂಟ್ ಸದ್ಯ ಮಲೈಕಾ ಮಾಡಿರುವ ಇನ್ ಸ್ಟಾ ಪೋಸ್ಟ್ ಎಂಗೇಜ್ ಮೆಂಟ್ ಬಗ್ಗೆ ಎಂದು ಕೆಲವರು ಹೇಳುತ್ತಿದ್ದಾರೆ.