Priyanka Chopra : ಲಕ್ನೋ ಮಹಿಳೆಯರಿಗೆ ಸಂಜೆ 7 ಗಂಟೆಯ ಹೊರಬರಲು ನಂತರ ಹೊರಬರಲು ಭಯವಿದೆ – ಪ್ರಿಯಾಂಕಾ
ಮೂರು ವರ್ಷಗಳ ನಂತರ ಭಾರತಕ್ಕೆ ಆಗಮಿಸಿರುಚ ಪ್ರಿಯಾಂಕ ಚೋಪ್ರಾ ಯುನಿಸೆಫ್ ನ ರಾಯಭಾರಿಯಾಗಿ ಉತ್ತರ ಪ್ರದೇಶದ ಲಕ್ನೋಗೆ ಬೇಟಿ ನೀಡಿದ್ದಾರೆ. ಈ ವೇಳೆ ಪ್ರಿಯಾಂಕ ಹಲವು ವಿಡಿಯೋಗಳನ್ನ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮಹಿಳೆಯ ಸುರಕ್ಷತೆ ಕುರಿತಂತೆ ತೆಗೆದುಕೊಳ್ಳಲಾಗುತ್ತಿರುವ ಪ್ರಯತ್ನಗಳ ಬಗ್ಗೆ ಪೊಲೀಸರೊಂದಿಗೆ ಮಾತನಾಡಿದ ಪ್ರಿಯಾಂಕ ನಾನು ಕೂಡ ಲಕ್ನೋದಲ್ಲಿ ಬೆಳೆದಿದ್ದೇನೆ. ರಾಜ್ಯದಲ್ಲಿ ಮಹಿಳೆಯರಿಗೆ ಸಂಜೆ 7 ಗಂಟೆಯ ನಂತರ ಹೊರಬರಲಾಗಷ್ಟು ಭಯಾನಕವಾಗಿದೆ ಎಂದು ಮಾತನಾಡುವ ವಿಡೀಯೋವನ್ನ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಪೊಲೀಸ್ ಮಹಿಳೆಯನ್ನ ಉದ್ದೇಶಿಸಿ ಮಾತನಾಡುತ್ತಿರುವ ಅವರು ದಯವಿಟ್ಟು ಹೇಳಿ ಉತ್ತರಪ್ರದೇಶದಂತಹ ರಾಜ್ಯದಲ್ಲಿ, ನಾನು ಲಕ್ನೋದಲ್ಲಿಯೂ ಬೆಳೆದಿದ್ದೇನೆ… ವಿಶೇಷವಾಗಿ ಸಂಜೆ 7 ಗಂಟೆಯ ನಂತರ ತುಂಬಾ ಭಯದ ವಾತವರಣವಿದೆ ಎಂದು ಹೇಳಿದ್ದಾರೆ.
ಪ್ರಿಯಾಂಕಾ ಚೋಪ್ರಾ ರಾಜ್ಯದಲ್ಲಿ ಮಹಿಳೆಯರು ಮತ್ತು ಬಾಲಕಿಯರ ಶಿಕ್ಷಣವನ್ನುಕೇಂದ್ರೀಕರಿಸಿದ ಕೆಲವು ಕೇಂದ್ರಗಳಿಗೆ ಭೇಟಿ ನೀಡಿದರು. ವಿದ್ಯಾರ್ಥಿಗಳೊಂದಿಗೆ ಕಳೆದ ಸಮಯದ ಫೋಟೋಗಳನ್ನ ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ.