Rashmika : ‘ಥ್ಯಾಂಕ್ ಯೂ ಮೈ ಲವ್ಸ್’ ಎಂದ ರಶ್ಮಿಕಾ..!! ಸಾನ್ವಿಯ ಆ ‘ಲವ್ಸ್’ ಯಾರು..??
ರಶ್ಮಿಕಾ ಮಂದಣ್ಣ ಏನೇ ಮಾಡ್ಲಿ ಸುದ್ದಿ , ಏನೇ ಮಾಡಿದ್ರೂ ಟ್ರೋಲ್…
ಇದೀಗ ರಶ್ಮಿಕಾ ಥ್ಯಾಂಕ್ ಯೂ ‘ಮೈ ಲವ್ಸ್’ ಎಂದು ಬರೆದುಕೊಂಡಿದ್ದಾರೆ..
ಅಂದ್ಹಾಗೆ ಅವರು ಥ್ಯಾಂಕ್ ಯೂ ಮೈ ಲವ್ಸ್ ಅಂದಿರೋದು ತಮಗೆ ಬೆಂಬಲ ನೀಡಿದವರಿಗೆ.. ತಾವು ಟ್ರೋಲರ್ ಗಳಿಗೆ ಕ್ಲಾಸ್ ತೆಗೆದುಕೊಂಡಾಗ ಯಾರೆಲ್ಲಾ ಬೆಂಬಲ ಸೂಚಿಸಿದ್ರೋ ಅವರಿಗೆ..!!
ಹೌದು..!!
ತಾವು ಟ್ರೋಲ್ ಗಳಿಂದಾಗಿ ಅನುಭವಿಸಿದ ತೊಂದರೆಗಳ ಬಗ್ಗೆ ಇತ್ತೀಚೆಗೆ ಇಂಗ್ಲಿಷ್ ಸುಧೀರ್ಘವಾಗಿ ಬರೆದುಕೊಂಡಿದ್ದ ಟಾಲಿವುಡ್ ನಟಿ ರಶ್ಮಿಕಾಗೆ ಅನೇಕರು ಸಪೋರ್ಟ್ ಮಾಡಿದ್ದರು..
ಸಿನಿಮಾ ಕ್ಷೇತ್ರವಾಗಿ ಹಾಗಿದೆ. ಅದನ್ನು ನಾನು ಆಯ್ಕೆ ಮಾಡಿಕೊಂಡಿದ್ದು. ಹಾಗಾಗಿ ನಾನು ಒಂದು ರೀತಿಯಲ್ಲಿ ಪಂಚಿಂಗ್ ಬ್ಯಾಗ್ ಆಗಿ ಬಿಟ್ಟಿದ್ದೇನೆ ಎಂದು ಅವರು ನೊಂದುಕೊಂಡಿದ್ದಾರೆ. ನಾನು ಸುಮ್ಮನಿದ್ದೇನೆ ಆದ್ರೆ ಈಗ ಸುಮ್ಮನಿರಲಾರೆ ಎಂದಿದ್ದರು..
ಅವರ ಪೋಸ್ಟ್ ಗೆ ಅನೇಕ ಸೆಲೆಬ್ರಿಟಿಗಳು ಅಭಿಮಾನಿಗಳು ಬೆಂಬಲಿಸಿ ರಶ್ಮಿಕಾ ಪರ ನಿಂತಿದ್ದರು.. ಅವರೆಲ್ಲರಿಗೂ ‘ಥ್ಯಾಂಕ್ ಯು ಮೈ ಲವ್ಸ್’ ಎಂದು ಬರೆದು ಧನ್ಯವಾದ ಅರ್ಪಿಸಿದ್ದಾರೆ ರಶ್ಮಿಕಾ..